Bengaluru, ಮಾರ್ಚ್ 8 -- Actor Kishore: ಬಹುಭಾಷಾ ನಟ ಕಿಶೋರ್‌, ಕನ್ನಡ ಮಾತ್ರವಲ್ಲದೆ, ಪರಭಾಷೆಯ ಸಿನಿಮಾಗಳಲ್ಲಿಯೂ ತಮ್ಮ ಛಾಪು ಮೂಡಿಸಿದ್ದಾರೆ. ತಮಿಳು, ತೆಲುಗು, ಮಲಯಾಳಂ ಸಿನಿಮಾಗಳಲ್ಲಿಯೂ ನಟಿಸಿ ಸೈ ಎನಿಸಿಕೊಂಡಿದ್ದಾರೆ. ನಟನೆಯ ಜತೆಗೆ ರಾಜಕಾರಣ, ಪ್ರಸಕ್ತ ಘಟನಾವಳಿಗಳ ಬಗ್ಗೆಯೂ ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಹಂಚಿಕೊಳ್ಳುತ್ತಿರುತ್ತಾರೆ. ಇದೀಗ 16ನೇ ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವದ ಸಮಾರೋಪ ಸಮಾರಂಭದಲ್ಲಿ ಮಾಂಸ ತಿಂದು ದೇವಸ್ಥಾನಕ್ಕೆ ಹೋದರೆ ತಪ್ಪೇನಿದೆ? ಎಂದಿದ್ದಾರೆ.

ನಟ ಕಿಶೋರ್‌, ಈ ಸಲದ ಸಿನಿಮೋತ್ಸವದ ರಾಯಭಾರಿಯಾಗಿದ್ದಾರೆ. ಆ ಹಿನ್ನೆಲೆಯಲ್ಲಿ ಕಳೆದ ಐದು ದಿನಗಳಿಂದ ಚಿತ್ರೋತ್ಸವದಲ್ಲಿ ಭಾಗವಹಿಸಿದ್ದ ಅವರು, ಇದೀಗ ಸಮಾರೋಪ ಸಮಾರಂಭದಲ್ಲಿಯೂ ಮಾತನಾಡಿದ್ದಾರೆ. ಡಾ. ರಾಜ್‌ಕುಮಾರ್‌ ಅವರ ಸಿನಿಮಾಗಳು ಮತ್ತು ಸಮಾಜದ ಮೇಲೆ ಅವು ಬೀರಿದ ಪ್ರಭಾವ ಎಂಥದ್ದು ಎಂಬುದನ್ನು ಎಳೆ ಎಳೆಯಾಗಿ ವಿಸ್ತರಿಸಿದ್ದಾರೆ. ಬೇಡ ಕುಲದ ದೀನ, ಶಿವನಿಗೆ ಮಾಂಸವನ್ನೇ ನೈವೇದ್ಯವಾಗಿ ನೀಡುತ್ತಾನೆ. ಬೇಡರ ಕಣ್ಣಪ್ಪ ಸಿನ...