ಭಾರತ, ಮಾರ್ಚ್ 12 -- ಮಾಂಸಾಹಾರಿ ಪ್ರಿಯರು ಅದರಲ್ಲೂ ಚಿಕನ್ ಪ್ರಿಯರು, ಅಮೃತಸರಿ ತಂದೂರಿ ಚಿಕನ್ ಪಾಕವಿಧಾನವನ್ನು ಖಂಡಿತವಾಗಿಯೂ ಪ್ರಯತ್ನಿಸಲೇಬೇಕು. ಪಂಜಾಬಿ ಆಹಾರವು ರುಚಿಕರವಾದ ಚಿಕನ್ ಪಾಕವಿಧಾನಗಳಿಗೆ ಹೆಸರುವಾಸಿಯಾಗಿದೆ. ಇವುಗಳಲ್ಲಿ ಅಮೃತಸರಿ ತಂದೂರಿ ಚಿಕನ್ ಕೂಡ ಒಂದು. ಇದನ್ನು ತಯಾರಿಸುವುದು ತುಂಬಾ ಸರಳ. ಚಿಕನ್ ಮಾಂಸಕ್ಕೆ ದಪ್ಪ ಹುಳಿ ಮೊಸರು, ಬೆಣ್ಣೆ, ಸಾಸಿವೆ ಎಣ್ಣೆ ಮತ್ತು ಕೆಂಪು ಮೆಣಸಿನ ಪುಡಿ, ದಾಲ್ಚಿನ್ನಿ ಮುಂತಾದ ಮಸಾಲೆಗಳನ್ನು ಹಾಕಿ ಹುರಿಯಲಾಗುತ್ತದೆ. ಈ ತಂದೂರಿ ಚಿಕನ್ ಉತ್ತಮ ರುಚಿ ಹೊಂದಿರುತ್ತದೆ. ಅಮೃತಸರಿ ತಂದೂರಿ ಚಿಕನ್ ತಯಾರಿಸುವುದು ಹೇಗೆ ಅನ್ನೋದನ್ನು ಇಲ್ಲಿ ತಿಳಿದುಕೊಳ್ಳಿ.

ಬೇಕಾಗುವ ಸಾಮಗ್ರಿಗಳು: 2 ಚಮಚ ಕೆಂಪು ಮೆಣಸಿನ ಪುಡಿ,1 ತುಂಡು ದಾಲ್ಚಿನ್ನಿ, 3 ತುಂಡು ಹಸಿರು ಏಲಕ್ಕಿ, 3 ಚಮಚ ಸಾಸಿವೆ ಎಣ್ಣೆ, 2 ಬಿರಿಯಾನಿ ಎಲೆ, 6 ಲವಂಗ, 1 1/2 ಕಪ್ ದಪ್ಪ ಹುಳಿ ಮೊಸರು, 750 ಗ್ರಾಂ ಕೋಳಿ ಮಾಂಸ, 2 ಚಮಚ ನಿಂಬೆ ರಸ, ಉಪ್ಪು ಅಗತ್ಯಕ್ಕೆ ತಕ್ಕಷ್ಟು, 2 ಚಮಚ ಬೆಣ್ಣೆ, 1 ಚಮಚ ಕೊತ್ತಂಬರಿ ಬೀಜ...