Bengaluru, ಮೇ 13 -- ಶಾಂಪೂ, ಸಾಬೂನು, ಕಂಡೀಷನರ್, ಬಾಡಿಲೋಷನ್ ಅಂತೆಲ್ಲಾ ಈ ಉತ್ಪನ್ನಗಳನ್ನು ಮಹಿಳೆಯರು ಹೆಚ್ಚಾಗಿ ಬಳಸುತ್ತಾರೆ. ಆದರೆ, ಈ ಉತ್ಪನ್ನಗಳು ಫಾರ್ಮಾಲ್ಡಿಹೈಡ್ ಎಂಬ ಕ್ಯಾನ್ಸರ್ ಕಾರಕವನ್ನು ಹೊಂದಿರುತ್ತವೆ ಎಂದು ಇತ್ತೀಚಿನ ಅಧ್ಯಯನವೊಂದು ಕಂಡುಹಿಡಿದಿದೆ. ಈ ರಾಸಾಯನಿಕವು ಕ್ಯಾನ್ಸರ್‌ಗೆ ಸಂಬಂಧಿಸಿದೆ. ಇದನ್ನು ಸಾಮಾನ್ಯವಾಗಿ ಶಾಂಪೂ, ಲೋಷನ್, ಬಾಡಿ ಸೋಪ್ ಇತ್ಯಾದಿ ಉತ್ಪನ್ನಗಳಿಗೆ ಸೇರಿಸಲಾಗುತ್ತದೆ.

ಎನ್ವಿರಾನ್ಮೆಂಟಲ್ ಸೈನ್ಸ್ & ಟಾಕ್ಸಿಕಾಲಜಿ ಲೆಟರ್ಸ್‍ನಲ್ಲಿ ಪ್ರಕಟವಾದ ಇತ್ತೀಚಿನ ಅಧ್ಯಯನವು, ಹೆಚ್ಚಿನ ಜನರು ಫಾರ್ಮಾಲ್ಡಿಹೈಡ್ ಬಿಡುಗಡೆ ಮಾಡುವ ರಾಸಾಯನಿಕಗಳನ್ನು ಹೊಂದಿರುವ ವೈಯಕ್ತಿಕ ಆರೈಕೆ ಉತ್ಪನ್ನಗಳನ್ನು ಬಳಸುತ್ತಾರೆ ಎಂದು ಬಹಿರಂಗಪಡಿಸಿದೆ.

ಈ ಸಂಶೋಧನೆಯು ಕ್ಯಾನ್ಸರ್ ಉಂಟುಮಾಡುವ ರಾಸಾಯನಿಕಗಳು ಕೇವಲ ಹೇರ್ ಸ್ಟ್ರೈಟ್‍ನಿಂಗ್ ಮಾತ್ರವಲ್ಲ ಬಹುತೇಕ ಎಲ್ಲಾ ಸೌಂದರ್ಯ ಉತ್ಪನ್ನಗಳಲ್ಲಿ ಇರುತ್ತವೆ ಎಂಬ ಆತಂಕಕಾರಿ ಅಂಶವನ್ನು ತಿಳಿಸುತ್ತದೆ.

ಲಾಸ್ ಏಂಜಲೀಸ್‍ನಲ್ಲಿ ಮಹಿಳೆಯರೊಂದಿಗೆ ನಡೆಸಿದ ಅಧ...