ಭಾರತ, ಜನವರಿ 30 -- ಭಾರತದಲ್ಲಿ ಗರ್ಭಕಂಠದ ಕ್ಯಾನ್ಸರ್ ಮಹಿಳೆಯರಿಗೆ ಕಾಡುವ ಸಾಮಾನ್ಯವಾದ ಕ್ಯಾನ್ಸರ್‌ಗಳಲ್ಲಿ ಒಂದಾಗಿದೆ. ಇದು ಪ್ರಪಂಚದಾದ್ಯಂತ ಮಹಿಳೆಯರ ಮೇಲೆ ಪರಿಣಾಮ ಬೀರುವ ನಾಲ್ಕನೇ ಸಾಮಾನ್ಯ ಕ್ಯಾನ್ಸರ್. ಆದರೆ, ವೈದ್ಯಕೀಯ ಕ್ಷೇತ್ರದಲ್ಲಿನ ಸುಧಾರಣೆಗಳೊಂದಿಗೆ, ಈ ಆರೋಗ್ಯ ಸಮಸ್ಯೆಯನ್ನು ಇಂದು ಬಹಳ ಮಟ್ಟಿಗೆ ತಡೆಗಟ್ಟಬಹುದು. ಗರ್ಭಕಂಠದ ಕ್ಯಾನ್ಸರ್‌ಗೆ ಪ್ರಮುಖ ಲಸಿಕೆಯಾಗಿರುವ ಹ್ಯೂಮನ್ ಪ್ಯಾಪಿಲೋಮವೈರಸ್ (HPV) ಲಸಿಕೆಯು ಈ ಕಾಯಿಲೆಯನ್ನು ತಡೆಗಟ್ಟುವಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಈ ಬಗ್ಗೆ ಮಣಿಪಾಲ್ ಆಸ್ಪತ್ರೆ, ಯಶವಂತಪುರ ಬೆಂಗಳೂರಿನ ಮಿನಿಮಲಿ ಇನ್ವೇಸಿವ್ ಸ್ತ್ರೀರೋಗ ಶಾಸ್ತ್ರ ತಜ್ಞೆ ಡಾ. ಶಫಾಲಿಕಾ ಎಸ್.ಬಿ ಅವರ ಬರಹ ಇಲ್ಲಿದೆ.

ತಡೆಗಟ್ಟುವಿಕೆಯ ಮೊದಲ ಹೆಜ್ಜೆ: ಗರ್ಭಕಂಠದ ಕ್ಯಾನ್ಸರ್‌ನಿಂದ ರಕ್ಷಿಸಿಕೊಳ್ಳಲು ಎಲ್ಲರಿಗೂ ಲಸಿಕೆ ನೀಡುವುದು ಉತ್ತಮ ಮಾರ್ಗ. ಎಚ್‌ಪಿವಿ ಲಸಿಕೆಯು 9 ರಿಂದ 45 ವರ್ಷ ವಯಸ್ಸಿನ ಹೆಣ್ಮಕ್ಕಳು ಮತ್ತು ಮಹಿಳೆಯರಿಗೆ ಗರ್ಭಕಂಠದ ಕ್ಯಾನ್ಸರ್‌ಗೆ ಕಾರಣವಾಗುವ ಎಚ್‌ಪಿವಿ ವೈರಸ್...