Hubli, ಏಪ್ರಿಲ್ 10 -- ಹುಬ್ಬಳ್ಳಿ : ಮಹಿಳೆಯೊಬ್ಬರಿಗೆ ಕಿರುಕುಳ ನೀಡುತ್ತಿರುವುದಾಗಿ ಆರೋಪಿಸಿ ಹುಬ್ಬಳ್ಳಿ ನಗರದ ಯಲ್ಲಾಪುರ ಓಣಿಯ ಬೇಕರಿ ನಡೆಸುತ್ತಿರುವ ಮಧು ಎಂ.ಟಿ. ಎಂಬವರನ್ನು ಬೆದರಿಸಿ, ಅಪಹರಿಸಿ, ಅವರ ಮೇಲೆ ಹಲ್ಲೆ ನಡೆಸಿ 50 ಸಾವಿರ ರೂ. ವಸೂಲಿ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಹುಬ್ಬಳ್ಳಿ ಧಾರವಾಡದ ಘಂಟಿಕೇರಿ ಪೊಲೀಸರು ಬಂಧಿಸಿದ್ದಾರೆ. ಸೆಟ್ಲಮೆಂಟ್ ನಿವಾಸಿಗಳಾದ ಕೃಷ್ಣಾ ಇಂದರಗಿ(31), ಸುನೀಲ ಕನ್ನೇಶ್ವರ (36), ಸತೀಶ ಇಂದರಗಿ (26) ಹಾಗೂ ಹಾಸನ ಜಿಲ್ಲೆ ಸುಂಡೇನಹಳ್ಳಿಯ ಹಾಲಿ ಹಳೇಹುಬ್ಬಳ್ಳಿ ಗಣೇಶ ಕಾಲನಿ ನಿವಾಸಿಯಾಗಿರುವ ಕುಮಾರ ಬಿ.ಎಸ್. ಎಂಬವರೇ ಬಂಧಿತರಾಗಿದ್ದಾರೆ. ಬಂಧಿತರಿಂದ ಕೃತ್ಯಕ್ಕೆ ಬಳಸಿದ ಎರಡು ಬೈಕ್, ಹಾಗೂ ೫೦ ಸಾವಿರ ರೂ.ಗಳನ್ನು ವಶಪಡಿಕೊಳ್ಳಲಾಗಿದೆ ಎಂದು ಘಂಟಿಕೇರಿ ಪೊಲೀಸರು ತಿಳಿಸಿದ್ದಾರೆ.

ಪೊಲೀಸ್ ಠಾಣೆಯಲ್ಲಿ ದೂರು ನೀಡಿದ ಬೇಕರಿ ಮಾಲೀಕ ಮಧು ಎಂ.ಟಿ. ಎಂಬವರು, 'ಕೆಲದಿನಗಳ ಹಿಂದೆ ಯಲ್ಲಾಪೂರ ಓಣಿಯ ಬೇಕರಿಗೆ ಆಗಮಿಸಿದ್ದ ಮಹಿಳೆಯೊಬ್ಬರು ಕೆಲವು ತಿಂಡಿಗಳನ್ನು ತೆಗೆದು...