ಭಾರತ, ಮಾರ್ಚ್ 8 -- ನವದೆಹಲಿ: ಇಂದು (ಮಾರ್ಚ್‌ 8) ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ. ವಿಶೇಷ ದಿನದಂದು ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳನ್ನು ಆರು ಮಹಿಳೆಯರಿಗೆ ವಹಿಸಿದ್ದಾರೆ. ಅಂದರೆ ಈ ದಿನ ಮೋದಿ ಅವರ ಸೋಷಿಯಲ್‌ ಮೀಡಿಯಾ ಖಾತೆಗಳನ್ನು ಈ ಮಹಿಳೆಯರು ನಿಭಾಯಿಸುತ್ತಾರೆ. ಆ ಮೂಲಕ ನಾರಿ ಶಕ್ತಿಯನ್ನು ವಿವರಿಸುವ ತಮ್ಮ ಬದ್ಧತೆಯನ್ನು ಪ್ರಧಾನಿ ತೋರಿಸಿಕೊಂಡಿದಾದರೆ. ದೇಶದ ಮೂಲೆ ಮೂಲೆಯ ಮಹಿಳೆಯರು ಪ್ರಧಾನಿ ಮೋದಿಯವರ ವಿಶೇಷ ಉಪಕ್ರಮದಲ್ಲಿ ಭಾಗಿಯಾಗಿದ್ದಾರೆ. ಅವರು ಯಾರ್ಯಾರು ಎಂಬುದನ್ನು ನೋಡೋಣ.

ಚೆಸ್‌ ಆಟಗಾರ್ತಿ ಚೆನ್ನೈನ ವೈಶಾಲಿ ರಮೇಶ್ ಬಾಬು, ದೆಹಲಿಯ ಡಾ.ಅಂಜಲೀ ಅಗರ್ವಾಲ್, ನಳಂದದ ಅನಿತಾ ದೇವಿ, ಭುವನೇಶ್ವರದ ಎಲಿನಾ ಮಿಶ್ರಾ, ರಾಜಸ್ಥಾನದ ಅಜೈತಾ ಶಾ ಮತ್ತು ಸಾಗರದ ಶಿಲ್ಪಿ ಸೋನಿ ಈ ಆರು ಮಂದಿ. ಇವರಿಗೆ ಮೋದಿಯವರು ಇಂದು ಸಾಮಾಜಿಕ ಮಾಧ್ಯಮ ನಿಭಾಯಿಸುವ ಜವಾಬ್ದಾರಿ ವಹಿಸಿದ್ದಾರೆ.

ಎಲಿನಾ ಮಿಶ್ರಾ ಮತ್ತು ಶಿಲ್ಪಿ ಸೋನಿ ಇಬ್ಬರೂ ವಿಜ್ಞಾನಿಗಳು. ಅತ್ಯಾಧುನಿಕ ಸಂಶೋಧನೆ ನಡೆಸುತ್ತಿರುವ...