ಭಾರತ, ಫೆಬ್ರವರಿ 27 -- ಹತ್ತೂರು ಒಡೆಯ ಪುತ್ತೂರು ಶ್ರೀ ಮಹಾಲಿಂಗೇಸ್ವರ ದೇವರ ಸನ್ನಿಧಿಯಲ್ಲಿ ಬುಧವಾರ (ಫೆ 26) ವೈಭವದ ಮಹಾ ಶಿವರಾತ್ರಿ ಉತ್ಸವ ನೆರವೇರಿತು. ಭಕ್ತರು ಬೆಳಗ್ಗೆಯಿಂದಲೇ ಮಹಾಲಿಂಗೇಶ್ವರನ ಸನ್ನಿಧಿಗೆ ಆಗಮಿಸಿ ದೇವರ ದರ್ಶನ ಪಡೆದು, ಬಿಲ್ವ ದಳ ಸಮರ್ಪಣೆ ಮಾಡಿದರು. ಶಿವರಾತ್ರಿ ಜಾಗರಣೆಯೂ ನಡೆಯಿತು. ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆದ ಶಿವರಾತ್ರಿ ವೈಭವದ ಚಿತ್ರನೋಟ ಇಲ್ಲಿದೆ.

ಮಹಾ ಶಿವರಾತ್ರಿ ಪ್ರಯುಕ್ತ ದೇವಸ್ಥಾನದಲ್ಲಿ ಗಣಪತಿ ಹೋಮ, ಬೆಳಿಗ್ಗೆ 9ಕ್ಕೆ ಶತರುದ್ರಾಭಿಷೇಕ ಹಾಗು ರುದ್ರಯಾಗ ಆರಂಭಗೊಂಡು 11.30ಕ್ಕೆ ಪೂರ್ಣಾಹುತಿ ನಡೆಯತು. ಮಧ್ಯಾಹ್ನ ಗಂಟೆ 12ಕ್ಕೆ ಮಹಾಮಂಗಳಾರತಿ ನಂತರ ಸಾರ್ವಜನಿಕ ಅನ್ನಸಂಪರ್ತಣೆ ನೆರವೇರಿತು. ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ ಕಾರ್ಯಕ್ರಮಗಳ ನೇತೃತ್ವವಹಿಸಿದರು.

ಏಕಬಿಲ್ವಂ ಶಿವಾರ್ಪಣಂ: ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ತುಳಸಿ ಕಟ್ಟೆ ಸಮೀಪ ಭಕ್ತರು ನೇರವಾಗಿ ಬಿಲ್ವಾರ್ಚನೆ ಮಾಡುವುದಕ್ಕೆ ಅನ...