ಭಾರತ, ಫೆಬ್ರವರಿ 16 -- Maha Shivaratri 2025: ಮಾಘ ಮಾಸದಲ್ಲಿ ಮಾಡುವ ಪೂಜೆ ಮತ್ತು ದಾನ ಧರ್ಮಗಳಿಂದ ಸಂಪೂರ್ಣವಾದ ಶುಭಫಲಗಳು ದೊರೆಯುತ್ತವೆ. ಈ ಮಾಸದಲ್ಲಿ ಶಿವ ಪೂಜೆಗೆ ವಿಶೇಷ ಆಧ್ಯತೆ ನೀಡಲಾಗುತ್ತದೆ. 2025 ರ ಫೆಬ್ರವರಿಯ 25 ರಂದು ಮಹಾ ಪ್ರದೋಷದ ಪೂಜೆಯನ್ನು ಮಾಡಬೇಕು. ಫೆಬ್ರವರಿ 26 ರಂದು ಮಹಾಶಿವರಾತ್ರಿಯ ಪೂಜೆಯನ್ನು ಮಾಡಬೇಕು. ಇದೇ ದಿನದಂದು ಶನೈಶ್ಚರ ಜಯಂತಿಯ ಪೂಜೆಯನ್ನೂ ಮಾಡಬೇಕಾಗುತ್ತದೆ. ಮಾಘಮಾಸದ ಅಮಾವಾಸ್ಯೆಯ ದಿನದಂದು ಮಹಾ ರುದ್ರಹೋಮವನ್ನು ಮಾಡಿದಲ್ಲಿ ಜೀವನದ ಕಷ್ಟ ನಷ್ಟಗಳು ದೂರವಾಗುತ್ತವೆ.

ಸಾಮಾನ್ಯವಾಗಿ ಶಿವರಾತ್ರಿಯ ದಿನದಂದು 4 ಯಾಮದ ಪೂಜೆಯನ್ನು ಮಾಡುತ್ತೇವೆ. ಮೊದಲ ಮೂರು ಯಾಮಗಳಲ್ಲಿ ಉಪವಾಸವನ್ನು ಆಚರಿಸುವುದು ಒಳ್ಳೆಯದು. ಆದರೆ ಕೊನೆಯ ಯಾಮದಲ್ಲಿ ಉಪವಾಸ ಮಾಡಬೇಕೆಂಬ ನಿಯಮವಿಲ್ಲ. ಅನಾರೋಗ್ಯವಿದ್ದಲ್ಲಿ ಶಿವರಾತ್ರಿಯ ದಿನದಂದು ಹಗಲಿನಲ್ಲಿ ಆಹಾರವನ್ನು ಸೇವಿಸಬಹುದು. ಈ ದಿನದಂದು ಎಳ್ಳುಬೆರೆಸಿದ ನೀರಿನಿಂದ ಸ್ನಾನವನ್ನು ಮಾಡುವುದು ಫಲದಾಯಕ. ಹಣೆಯಲ್ಲಿ ವಿಭೂತಿ ಧರಿಸಿ ರುದ್ರಾಕ್ಷಿಮಾಲೆಯನ್ನು ಕ...