ಭಾರತ, ಫೆಬ್ರವರಿ 26 -- ಉಡುಪಿ/ಹುಬ್ಬಳ್ಳಿ: ಮಹಾ ಶಿವರಾತ್ರಿಯ ಪ್ರಯುಕ್ತ ಉಡುಪಿ ಜಿಲ್ಲೆಯ ಕೋಟೇಶ್ವರ ಕೋಡಿ ಬೀಚ್‌ನಲ್ಲಿ ಸುಂದರ ಮರಳು ಕಲಾಕೃತಿ ರಚಿಸಲಾಗಿದೆ. ಕುಂದಾಪುರದ ತ್ರಿವರ್ಣ ಕಲಾ ತರಗತಿಯ 23 ವಿದ್ಯಾರ್ಥಿನಿಯರು ಬಿಲ್ವಪತ್ರೆ, ರುದ್ರಾಕ್ಷಿಮಾಲಾವೃತ ಶಿವಲಿಂಗವು ನಂದಿ ಮತ್ತು ಹಾವಿನೊಳಗೊಂಡ ಪಾಳುಬಿದ್ದ ಗುಡಿಯ ಪರಿಕಲ್ಪನೆಯಲ್ಲಿ 12 ಅಡಿ ಅಗಲ ಮತ್ತು 4 ಅಡಿ ಎತ್ತರದ ಮರಳು ಕಲಾಕೃತಿ ರಚಿಸಿದ್ದಾರೆ. ಕಲಾಕೃತಿಯ ಮೂಲಕ ಜನರಿಗೆ ಶಿವರಾತ್ರಿ ಶುಭ ಹಾರೈಕೆ ಮಾಡಲಾಗಿದೆ. ಕಲಾಕೇಂದ್ರದ ಮಾರ್ಗದರ್ಶಕ, ಕಲಾವಿದ ಹರೀಶ್ ಸೇರಿದಂತೆ ಕಲಾ ವಿದ್ಯಾರ್ಥಿಗಳು ಪಾಲ್ಗೊಂಡರು.

ಮಹಾಶಿವರಾತ್ರಿ ಮಹೋತ್ಸವದ ನಿಮಿತ್ತ ಪ್ರತಿ ವರ್ಷದಂತೆ ಈ ಬಾರಿಯೂ ಕೇಂದ್ರ ಆಹಾರ ಸಚಿವ ಪ್ರಲ್ಹಾದ ಜೋಶಿ ಅವರು ದೇಶಪಾಂಡೆ ನಗರದ ಜಿಮಖಾನಾ ಮೈದಾನದಲ್ಲಿ ಭಕ್ತರಿಗೆ ಶ್ರೀ ಕಾಶಿ ವಿಶ್ವನಾಥೇಶ್ವರ ಮಾದರಿ ಶಿವಲಿಂಗ ದರ್ಶನಕ್ಕೆ ಅವಕಾಶ ಕಲ್ಪಿಸಿದ್ದರು. ಸಾವಿರಾರು ಭಕ್ತರು ವಿಶ್ವನಾಥನನ್ನು ಕಣ್ತುಂಬಿಕೊಂಡಿದ್ದಾರೆ. ಕೇಂದ್ರ ಸಚಿವ ಜೋಶಿ ಮಧ್ಯಾಹ್ನದ ವೇಳೆಗೆ ಮೈದ...