ಭಾರತ, ಜನವರಿ 29 -- ಬೆಂಗಳೂರು: ಉತ್ತರ ಪ್ರದೇಶದ ಪ್ರಯಾಗ್‌ ರಾಜ್​​ನಲ್ಲಿ ನಡೆಯುತ್ತಿರುವ ಮಹಾ ಕುಂಭ ಮೇಳದಲ್ಲಿ (Maha Kumbh Mela) ಖ್ಯಾತ ನಟ ಪ್ರಕಾಶ್ ರಾಜ್ ರೈ (Actor Prakash Raj) ಅವರು ತ್ರಿವೇಣಿ ಸಂಗಮದಲ್ಲಿ ಮಿಂದೆದ್ದರು ಎನ್ನಲಾದ ಫೋಟೋ ವೈರಲ್‌ ಆಗುತ್ತಿದೆ. ‌ಸಾಮಾಜಿಕ ಕಾರ್ಯಕರ್ತ ಹಾಗೂ ಕನ್ನಡದ ನಟ ಪ್ರಶಾಂತ್ ಸಂಬರಗಿ (Prashanth Sambargi) ಅವರು ಪ್ರಕಾಶ್‌ ರೈ ನದಿಯಲ್ಲಿ ಮುಳುಗಿ ಕೈ ಮುಗಿಯುತ್ತಿರುವ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಅವರೊಬ್ಬರೇ ಅಲ್ಲದೆ ಅನೇಕರು ಈ ಫೋಟೋವನ್ನು ಶೇರ್ ಮಾಡಿ ತರಾಟೆಗೆ ತೆಗೆದುಕೊಂಡಿದ್ದಾರೆ. ಆದರೆ, ಇದು ಎಐ (AI) ನಿರ್ಮಿತ ಫೋಟೋ ಎಂದು ಹೇಳಲಾಗುತ್ತಿದೆ.

ಕುಂಭಮೇಳದಲ್ಲಿ ಭಾಗವಹಿಸಿ ಪ್ರಕಾಶ್ ರಾಜ್ ಪುಣ್ಯ ಸ್ನಾನ ಮಾಡಿದ್ದಾರೆ. ಅವರ ಪಾಪಗಳು ತೊಳೆದು ಹೋಗಲಿ ಎಂದು ಆಶಾಭಾವನೆ ವ್ಯಕ್ತಪಡಿಸೋಣ ಎಂದು ‌ಸಂಬರಗಿ ತಾನು ಹಂಚಿಕೊಂಡ ಫೋಟೋಗೆ ಕ್ಯಾಪ್ಶನ್ ಬರೆದಿದ್ದಾರೆ. ಆದರೆ, ಈ ಪೋಸ್ಟ್​​ಗೆ ಆಕ್ಷೇಪ ವ್ಯಕ್ತಪಡಿಸಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ...