ಭಾರತ, ಜನವರಿ 28 -- ಬೆಂಗಳೂರು: ವಿಶ್ವದ ಅತಿ ದೊಡ್ಡ ಅಧ್ಯಾತ್ಮಿಕ, ಸಾಂಸ್ಕೃತಿ ಹಾಗೂ ಧಾರ್ಮಿಕ ಸಂಗಮವಾಗಿರುವ ಮಹಾ ಕುಂಭಮೇಳಕ್ಕೆ ದೇಶ, ವಿದೇಶ ಸೇರಿದಂತೆ ಮೂಲೆ ಮೂಲೆಗಳಿಂದ ಲಕ್ಷಾಂತರ ಮಂದಿ ಸಮರೋಪಾದಿಯಲ್ಲಿ ಭಾಗವಹಿಸಿ ಸಂಗಮದಲ್ಲಿ ಪವಿತ್ರ ಪುಣ್ಯ ಸ್ನಾನವನ್ನು ಮಾಡುತ್ತಿದ್ದಾರೆ. 2025ರ ಜನವರಿ 13 ರಿಂದ ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಆರಂಭವಾಗಿರುವ ಈ ಮಹಾ ಕುಂಭ ಮೇಳದಲ್ಲಿ ಈಗಾಗಲೇ ಕೋಟಿ ಕೋಟಿ ಜನರು ಪುಣ್ಯ ಸ್ನಾನ ಮಾಡಿದ್ದಾರೆ. 45 ದಿನಗಳ ಕುಂಭಮೇಳವು ಫೆಬ್ರವರಿ 26 ರ ಮಹಾಶಿವರಾತ್ರಿಯಂದು ಪೂರ್ಣಗೊಳ್ಳಲಿದ್ದು, ಭಕ್ತರು ಬರುತ್ತಲೇ ಇದ್ದಾರೆ. ಒಂದು ವೇಳೆ ನೀವೇನಾದರೂ ಕುಂಭ ಮೇಳದಲ್ಲಿ ಭಾಗಹಿಸಿದ್ದರೆ ಅಥವಾ ಅಲ್ಲಿಗೆ ಭೇಟಿ ನೀಡಲು ಪ್ಲಾನ್ ಮಾಡಿಕೊಂಡಿದ್ದರೆ ಕುಂಭ ಮೇಳದಲ್ಲಿನ ಸೌಲಭ್ಯಗಳ ಬಗ್ಗೆ ನಿಮಗೆ ಕನ್ನಡದಲ್ಲೇ ಸಂಪೂರ್ಣ ಮಾಹಿತಿ ಲಭ್ಯವಾಗಲಿದೆ.

ಮಹಾಕುಂಭ ಮೇಳ 2025, ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ (ಎಐ) ಬಳಸಿ ಕನ್ನಡದಲ್ಲಿ ಕನ್ನಡಿಗರಿಗಾಗಿ ಅಧಿಕೃತ ಮಾಹಿತಿ ನೀಡುವ ಸೌಲಭ್ಯವನ್ನು ಒದಗಿಸಲಾಗಿದೆ...