ಭಾರತ, ಫೆಬ್ರವರಿ 26 -- ಮಹಾಶಿವರಾತ್ರಿಯ ಅಭೂತಪೂರ್ವ ಅನುಭವವನ್ನು ಪಡೆಯಲು ಸಿದ್ಧರಾಗಿರುವ ಭಕ್ತರಿಗೆ, ಫೆಬ್ರವರಿ 26ರಂದು ಜಿಯೋ ಹಾಟ್‌ಸ್ಟಾರ್‍‌ನಲ್ಲಿ ಜ್ಯೋತಿರ್ಲಿಂಗಗಳ ಆರತಿಗಳ ನೇರ ಪ್ರಸಾರ ಕಾರ್ಯಕ್ರಮ ಲಭ್ಯವಿದೆ. ಸದ್ಗುರು ಅವರ ಪ್ರವಚನಗಳೊಂದಿಗೆ ಕೊಯಮತ್ತೂರಿನಿಂದ ಈಶ ಫೌಂಡೇಷನ್‌ನಲ್ಲಿ ರಾತ್ರಿಯಿಡೀ ನಡೆಯುವ ಕಾರ್ಯಕ್ರಮದ ನೇರ ಪ್ರಸಾರವನ್ನು ನೀವು ಜಿಯೋ ಹಾಟ್‌ಸ್ಟಾರ್‍‌ನಲ್ಲಿ ವೀಕ್ಷಿಸಬಹುದು. ಇಷ್ಟೇ ಅಲ್ಲದೇ ಇನ್ನೂ ಹಲವು ಕಾರ್ಯಕ್ರಮಗಳ ನೇರ ಪ್ರಸಾರ ಲಭ್ಯವಿದೆ. ಇಂದು (ಫೆ 26) ಸಂಜೆ ಆರು ಗಂಟೆಯಿಂದಲೇ ನೇರ ಪ್ರಸಾರ ಆರಂಭವಾಗಲಿದೆ.

ಆರ್ಟ್ ಆಫ್ ಲಿವಿಂಗ್ ಕಾರ್ಯಕ್ರಮಗಳ ನೇರ ಪ್ರಸಾರ, ಗಾಯಕಿ, ಸಂಗೀತ ಸಂಯೋಜಕಿ ಮತ್ತು ಗೀತ ರಚನೆಕಾರ್ತಿ ಸೋನಾ ಮೊಹಾಪಾತ್ರ ಅವರಿಂದ ಶಿವನ ಕುರಿತಾದ ಗೀತೆಗಳ ಸಂಗೀತ ಕಾರ್ಯಕ್ರಮ. ಶಿವ-ಪಾರ್ವತಿಯರು ಮತ್ತು ಶಿವನ ಕುರಿತಾದ ಆಚರಣೆಗಳು, ಪುರಾಣ ಮತ್ತು ಸಂಸ್ಕೃತಿಯ ಆಳವಾದ ತಿಳಿವಳಿಕೆ ನೀಡುವ ವಿಶೇಷ ಕಾರ್ಯಕ್ರಮಗಳನ್ನು ನೀವು ವೀಕ್ಷಿಸಬಹುದು.

ದೇಶಾದ್ಯಂತ ವಿವಿದೆಡೆ ನಡೆಯುತ್ತಿರುವ ಶ...