ಭಾರತ, ಫೆಬ್ರವರಿ 13 -- Mahashivaratri 2025: ದೇಶದಾದ್ಯಾಂತ ಈ ಬಾರಿ ಫೆಬ್ರವರಿ 26ರಂದು ಮಹಾಶಿವರಾತ್ರಿಯನ್ನು ಭಕ್ತರು ಆಚರಿಸಲು ಅಣಿಯಾಗಿದ್ದಾರೆ. ಶ್ರದ್ಧಾ ಭಕ್ತಿಯಿಂದ ಶಿವ ಪಾರ್ವತಿಯನ್ನು ಅಹೋರಾತ್ರಿ ಶಿವನಾಮ ಸ್ಮರಣೆಯೊಂದಿಗೆ ಆಚರಿಸುವುದು ರೂಢಿ. ಶಿವರಾತ್ರಿ ಎಂದರೆ ಶಿವನನ್ನು ಧ್ಯಾನಿಸುವ ರಾತ್ರಿ. ಇಡೀ ರಾತ್ರಿ ಶಿವನಾಮಸ್ಮರಣೆ ಮಾಡುತ್ತಾ, ಶಿವನನ್ನು ಆರಾಧಿಸುತ್ತಾ, ಶಿವನ ಬಗ್ಗೆಯೇ ಚಿಂತಿಸುತ್ತಾ ಕತ್ತಲೊಳಗೆ ಬೆಳಕನ್ನು ಕಾಣುವ ದಿನವೆಂದು ಹೇಳಬಹುದು. ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಮಹಾಶಿವರಾತ್ರಿಯಂದು ಸಹಸ್ರ ಸಂಖ್ಯೆಯಲ್ಲಿ ಶಿವಭಕ್ತ ಪಾದಯಾತ್ರಿಗಳ ಆಗಮನವಾಗುತ್ತದೆ.

ಶ್ರೀ ಮಂಜುನಾಥ ಸ್ವಾಮಿ ಪರಮಭಕ್ತರು ಕಾಲ್ನಡಿಗೆಯಿಂದಲೇ ಕರ್ನಾಟಕದಾದ್ಯಂತ ಶ್ರೀ ಕ್ಷೇತ್ರಕ್ಕೆ ಶಿವರಾತ್ರಿಯ 15-20 ದಿನಗಳ ಮೊದಲೇ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ತಲುಪುತ್ತಾರೆ. ಶುಭ ದಿನವನ್ನು, ಸಂಕಲ್ಪಮಾಡಿ ತಮ್ಮ ಊರಿನಿಂದ ಹೊರಡುವ ಪಾದಯಾತ್ರಿಗಳು ಬೆಂಗಳೂರು ಸಹಿತ ರಾಜ್ಯದ ಹಲವು ಭಾಗಗಳಿಂದ ಆಗಮಿಸುತ್ತಾರೆ.

ಶ್ರೀಮಂತ, ಬಡವ ಬೇಧವಿಲ್ಲ...