Maharashtra, ಮಾರ್ಚ್ 2 -- ಶಿವರಾತ್ರಿ ದಿನದಂದು ದೇವಸ್ಥಾನಕ್ಕೆ ಹೋಗಿದ್ದ ಯುವತಿಗೆ ಯುವಕರ ಗುಂಪೊಂದು ಕಿರುಕುಳ ನೀಡಿದ್ದು, ಆಕೆ ಕೇಂದ್ರ ಸಚಿವರ ಪುತ್ರಿ ಎಂದ ನಂತರವೂ ತೊಂದರೆ ನೀಡಿದ ಯುವಕರಿಗೆ ಪಾಠ ಕಲಿಸಲೆಂದು ಖುದ್ದು ಸಚಿವೆಯೇ ಠಾಣೆಗೆ ಹೋಗಿ ದೂರು ನೀಡಿದ್ದಾರೆ. ಈ ಘಟನೆ ನಡೆದಿರುವುದು ಮಹಾರಾಷ್ಟ್ರದ ಜಲಗಾಂವ್‌ನಲ್ಲಿ. ಮೂರು ದಿನದ ನಂತರ ಏಳು ಮಂದಿ ವಿರುದ್ದ ಪೋಕ್ಸೋ ಅಡಿ ಪ್ರಕರಣವನ್ನು ಮಹಾರಾಷ್ಟ್ರದ ಜಲಗಾಂವ್‌ ಪೊಲೀಸರು ದಾಖಲಿಸಿದ್ದಾರೆ. ಕೇಂದ್ರ ಸಚಿವೆಯಾದ ನನ್ನ ಪುತ್ರಿಗೆ ಭದ್ರತೆ ಇಲ್ಲ ಎಂದಾದರೆ ಇನ್ನು ಸಾಮಾನ್ಯರ ಗತಿಯೇನು. ಮಹಾರಾಷ್ಟ್ರದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹಾಳಾಗಿ ಹೋಗಿದೆ ಎಂದು ಕೇಂದ್ರ ಸಚಿವೆ ರೇಖಾ ಖಾಡ್ಸೆ ಹೇಳಿರುವುದು ಪ್ರತಿಪಕ್ಷಗಳಿಗೆ ಆಸ್ತ್ರವಾಗಿ ದೊರೆತಿದೆ

Published by HT Digital Content Services with permission from HT Kannada....