Vijayapura, ಮೇ 27 -- ವಿಜಯಪುರ- ಬಾಗಲಕೋಟೆ ಜಿಲ್ಲೆಯ ನಡುವೆ ಹಂಚಿ ಹೋಗಿರುವ ಆಲಮಟ್ಟಿಯ ಲಾಲ್ ಬಹದ್ದೂರು ಶಾಸ್ತ್ರಿ ಜಲಾಶಯದ ನೀರಿನ ಮಟ್ಟ ಮತ್ತೆ ಏರತೊಡಗಿದೆ. ಮಹಾರಾಷ್ಟ್ರದ ಮಳೆ ಪರಿಣಾಮ ಜಲಾಶಯಕ್ಕೆ ಜೀವ ಕಳೆ ಬರತೊಡಗಿದೆ.
ಮೇ ತಿಂಗಳಲ್ಲಿ ಜಲಾಶಯಕ್ಕೆ ಒಳ ಹರಿವುದು ಬರುವುದು ಅತೀ ಕಡಿಮೆ. ಮೂರು ವರ್ಷದ ಹಿಂದೆ ಅಲ್ಪ ಪ್ರಮಾಣದಲ್ಲಿ ನೀರು ಬಂದಿದ್ದು ಬಿಟ್ಟರೆ ಜೂನ್ ನಂತರವೇ ಒಳ ಹರಿವು ಹೆಚ್ಚುತ್ತದೆ. ಈ ಬಾರಿ ಮೇ ಕೊನೆ ವಾರವೇ ನೀರಿನ ಒಳ ಹರಿವು ಅಧಿಕವಾಗಿದೆ.
ಕಳೆದ ವರ್ಷ ಜಲಾಶಯ ತುಂಬಿದರೂ ಆಂಧ್ರಪ್ರದೇಶ, ತೆಲಂಗಾಣಕ್ಕೆ ನೀರು ಹರಿಸಿದ ಪರಿಣಾಮವಾಗಿ ಆರು ಟಿಎಂಸಿಯಷ್ಟು ನೀರು ಆಲಮಟ್ಟಿಯಲ್ಲಿ ಲಭ್ಯವಿತ್ತು. ಈಗ ಬೇಗನೇ ಮಳೆ ಬಂದಿರುವುದರಿಂದ ಮತ್ತೆ ಟಿಎಂಸಿ ಪ್ರಮಾಣದಲ್ಲಿ ಏರಿಕೆ ಕಾಣತೊಡಗಿದೆ.
ಆಲಮಟ್ಟಿ ವಿಭಾಗದಲ್ಲಿ ಲಭ್ಯ ಇರುವ ಮಾಹಿತಿ ಪ್ರಕಾರ ಮಂಗಳವಾರ ಬೆಳಿಗ್ಗೆ ಹೊತ್ತಿಗೆ ಜಲಾಶಯಕ್ಕೆ 48,807 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಇದು ಮೂರು ದಿನದಲ್ಲಿ ಗಣನೀಯವಾಗಿ ಏರಿಕೆ ಕಂಡಿದೆ.
ಆಲಮಟ್ಟಿ ಜಲಾಶಯದ ನ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.