ಭಾರತ, ಫೆಬ್ರವರಿ 26 -- ನಿರ್ದೇಶಕ, ಬರಹಗಾರ ನಾಗತಿಹಳ್ಳಿ ಚಂದ್ರಶೇಖರ್‌, ಸೋಷಿಯಲ್‌ ಮೀಡಿಯಾದಲ್ಲಿ ಚೆಂದನೆಯ ಬರಹ ಮತ್ತು ಒಂದಷ್ಟು ಫೋಟೋಗಳನ್ನು ಶೇರ್‌ ಮಾಡಿದ್ದಾರೆ. ‌

ಹಿರಿಯ ನಟ ದತ್ತಣ್ಣನ ಜತೆಗಿನ ಹರಟೆ, ವಿವಿಪುರಂ ಸ್ಟ್ರೀಟ್‌ ಫುಡ್‌ ಸ್ವಾದದ ಬಗ್ಗೆಯೂ ಬರೆದುಕೊಂಡಿದ್ದಾರೆ.

"ನಿನ್ನೆ ರಾತ್ರಿ ಹನ್ನೊಂದರಲ್ಲಿ ದತ್ತಣ್ಣ ನೆನಪಾದ. ಇನ್ನೂ ಬದುಕಿರಬಹುದು ಎಂಬ ಗುಮಾನಿಯಿಂದ ಅಣ್ಣನ ಕಸದ ತೊಟ್ಟಿಯಂಥ ರೂಮಿಗೆ ಹುಡುಕಿ ಹೋದೆ. ಕುಮಾರವ್ಯಾಸ ಬಳಸಿದ್ದಾನೆ ಎನ್ನಲಾದ "ಅನಪು" ಎಂಬ ಪದದ ಬಗ್ಗೆ ಅಣ್ಣ ತಲೆ ಕೆಡಿಸಿಕೊಂಡು ಕೂತಿದ್ದ"

"ಕುಮಾರವ್ಯಾಸ ಹಾಳು ಬಿದ್ದು ಹೋಗಲಿ ಬಾ ಏನಾದರೂ ಕೊಡಿಸ್ತೀನಿ ಎಂದು ವಿವಿ ಪುರಂನ ಫುಡ್ ಕೋರ್ಟಿಗೆ ಕರೆದುಕೊಂಡು ಹೋದರೆ ಒಂದು ಕಡೆ ಕೂತು ತಿನ್ನದ ಚಪಲ ಚಿತ್ತ"

"ಅವರೆಬೇಳೆ ದೋಸೆ, ಇಡ್ಲಿ, ಚಿತ್ರಾನ್ನ, ಪಲಾವ್, ಜಿಲೇಬಿ, ಬಾದಾಮಿ ಹಾಲು, ಬೀಡಾ..ಒಂದೊಂದು ಅಂಗಡಿಯಲ್ಲಿ ಒಂದೊಂದು ತಿನ್ನಬೇಕಂತೆ. ತಿಂಡಿಪೋತ"

"ಚೆನ್ನಾಗಿ ಚಚ್ಚಿದೆವು. ಅಣ್ಣನಿಗೆ ನಟ್ಟಿರುಳಲ್ಲೂ ಅಭಿಮಾನಿಗಳು. ರಿಬೇಟು. ಸೆಲ್ಫ...