ಭಾರತ, ಏಪ್ರಿಲ್ 1 -- Sanoj Mishra Arrest: ಮಹಾ ಕುಂಭ ಮೇಳದಲ್ಲಿ ವೈರಲ್ ಆಗಿ, ಸಾಕಷ್ಟು ಸುದ್ದಿ ಮಾಡಿದ್ದ ಬೆಡಗಿ ಮೊನಾಲಿಸಾ ಭೋಂಸ್ಲೆಗೆ ಸಿನಿಮಾ ಆಫರ್ ನೀಡುವ ಮೂಲಕ ತಾನು ಸುದ್ದಿಯಾಗಿದ್ದರು ನಿರ್ದೇಶಕ ಸನೋಜ್ ಮಿಶ್ರಾ. ಇದೀಗ ಅವರು ಮತ್ತೆ ಸುದ್ದಿಯಲ್ಲಿದ್ದಾರೆ. ಈ ನಿರ್ದೇಶಕ ಅತ್ಯಾಚಾರ ಆರೋಪದಲ್ಲಿ ಅರೆಸ್ಟ್ ಆಗಿದ್ದಾರೆ. ದೆಹಲಿಯಲ್ಲಿ ಇವರನ್ನು ಬಂಧಿಸಲಾಗಿದೆ.

ವರದಿಗಳ ಪ್ರಕಾರ ಸಣ್ಣ ಹಳ್ಳಿಯಿಂದ ಸಿನಿಮಾ ಅವಕಾಶ ಕೇಳಿಕೊಂಡು ಬಂದ ಯುವತಿಯೊಬ್ಬಳಿಗೆ ಸಿನಿಮಾ ಸ್ಟಾರ್ ಮಾಡುವುದಾಗಿ ಹೇಳಿ ಈ ನಿರ್ದೇಶಕ ಪದೇ ಪದೇ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

'2020ರಲ್ಲಿ ನಾನು ಝಾನ್ಸಿಯಲ್ಲಿದ್ದಾಗ ಟಿಕ್‌ಟಾಕ್ ಹಾಗೂ ಇನ್‌ಸ್ಟಾಗ್ರಾಂ ಮೂಲಕ ಸನೋಶ್ ಮಿಶ್ರಾ ಅವರನ್ನು ಸಂಪರ್ಕ ಮಾಡಿದ್ದೆ. 2021 ಜೂನ್ 17 ರಂದು ಮಿಶ್ರಾ ನನಗೆ ಕರೆ ಮಾಡಿದ್ದರು. ತಾನು ಝಾನ್ಸಿ ರೈಲು ನಿಲ್ದಾಣದಲ್ಲಿ ಇದ್ದೇನೆ, ನೀನು ನನ್ನನ್ನು ಭೇಟಿಯಾಗು ಎಂದು ಆತ ಹೇಳಿರುತ್ತಾರೆ. ಆದರೆ ನಾನು ಭೇಟಿಯಾಗಲು ನಿರಾಕರಿಸಿದಾಗ ತನ್ನ ಪ್ರಾಣ ...