Mysuru, ಮೇ 1 -- ಮೈಸೂರು ಪಾರಂಪರಿಕ ಕಟ್ಟಡಗಳ ಊರು. ಅದರಲ್ಲೂ ಅರಮನೆಯಂತೂ ಪ್ರಮುಖ ಆಕರ್ಷಣೆಯೇ.ಮಳೆ ಬಂತೆಂದರೆ ಅರಮನೆ ಎದುರು ಸೃಷ್ಟಿಯಾಗುವ ಈ ನೋಟ ಎಂತವರನ್ನು ಖುಷಿಗೊಳಿಸುತ್ತದೆ.

ಮೈಸೂರಿನ ಹೃದಯ ಭಾಗವೇ ಆಗಿರುವ, ಕೃಷ್ಣರಾಜೇಂದ್ರ ವೃತ್ತವನ್ನು ಪ್ರತಿಬಿಂಬದಲ್ಲಿ ಕಂಡಾಗ ಸಂತಸವೇ ಬೇರೆ,

ಮೈಸೂರು ಅರಮನೆ ಹಾಗೂ ಪುರಭವನ ಎದುರು ಇರುವ ಚಾಮರಾಜ ಒಡೆಯರ್‌ ಅವರ ವೃತ್ತದ ಸುತ್ತಲೂ ಉತ್ತಮ ಮಳೆಯಾಗಿ ಅಲ್ಲಿಯೂ ಮಹಾರಾಜರ ಬಿಂಬ ಮನಸೂರೆಗೊಳ್ಳುತ್ತದೆ.

ಮೈಸೂರಿನ ಆರು ರಸ್ತೆಗಳ ವೃತ್ತ, ಕೊನೆಯ ಮಹಾರಾಜ ಜಯಚಾಮರಾಜ ಒಡೆಯರ್‌ ಅವರ ಹೆಸರಿನಲ್ಲಿ ದಶಕದ ಹಿಂದೆಯಷ್ಟೇ ನಿರ್ಮಿಸಿರುವ ವೃತ್ತದ ನೋಟ ಹೇಗಿದೆ ನೋಡಿ

ಮೈಸೂರಿನ ಯಾವುದೇ ಬೀದಿಯಲ್ಲಿ ಒಂದು ಸುತ್ತು ಹಾಕಿ ಬನ್ನಿ. ಅಲ್ಲೆಲ್ಲೆ ತಂಪಿನ ವಾತಾವರಣದ ಜತೆಯಲ್ಲಿ ನೀರ ನೋಟ ಮನಸಿಗೆ ಮುದ ನೀಡುತ್ತದೆ.

ಮೈಸೂರು ಎಂದರೆ ಜೆಎಸ್‌ಎಸ್‌ ಮಹಾವಿದ್ಯಾಪೀಠವೂ ಪ್ರಮುಖ ಭಾಗವೇ. ಇದರ ಎದುರಿಗೆ ಇರುವ ಬಸವೇಶ್ವರರ ಪ್ರತಿಮೆ ಎದುರು ಕಂಡ ಬೆಳಗಿನ ನೋಟ.

ಇವರೇ ರವಿಕೀರ್ತಿಗೌಡ. ಐಟಿ ಉದ್ಯೋಗಿಯಾದರೂ...