Kodagu, ಮೇ 11 -- ಮೈಸೂರು ಹಾಗೂ ಕೊಡಗು ಜಿಲ್ಲೆಯಲ್ಲಿ ಹಂಚಿ ಹೋಗಿರುವ ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಮತ್ತಿಗೋಡು ಆನೆ ಶಿಬಿರ ಪ್ರವಾಸಿ ತಾಣವಾಗಿ ಮಾರ್ಪಟ್ಟಿದೆ.

ಹಲವಾರು ವರ್ಷಗಳಿಂದ ಇಲ್ಲಿ ಆನೆ ಶಿಬಿರ ಇದ್ದರೂ ಪ್ರವಾಸಿಗರ ಭೇಟಿಗೆ ಸೂಕ್ತ ವ್ಯವಸ್ಥೆ ಇರಲಿಲ್ಲ. ಕರ್ನಾಟಕ ಅರಣ್ಯ ಇಲಾಖೆ ಈಗ ಪ್ರವಾಸಿ ತಾಣದ ರೂಪ ನೀಡಿದೆ.

ದಸರಾ ಮೆರವಣಿಗೆಯಲ್ಲಿ ಭಾಗಿಯಾಗುವ ಅಭಿಮನ್ಯು ಸಹಿತ 17 ಆನೆಗಳು ,ಮತ್ತಿಗೋಡು ಆನೆ ಶಿಬಿರದಲ್ಲಿವೆ.

ಮೈಸೂರಿನಿಂದ ಹುಣಸೂರು ಮಾರ್ಗವಾಗಿ ಕೊಡಗಿನ ವೀರಾಜಪೇಟೆಗೆ ಹೋಗುವ ಮಾರ್ಗದಲ್ಲಿ ತಿತಿಮತಿ ಸಮೀಪದಲ್ಲಿದೆ ಈ ಆನೆ ಶಿಬಿರ.

ಆನೆಗಳಿಗೆ ಇಲ್ಲಿ ಅರಣ್ಯ ಇಲಾಖೆಯಿಂದ ನಿತ್ಯ ಆರೈಕೆ ಸೇರಿ ನಾನಾ ಚಟುವಟಿಕೆ ಇರಲಿವೆ. ಇದನ್ನು ಹತ್ತಿರದಿಂದಲೇ ವೀಕ್ಷಿಸಬಹುದು.ಮಕ್ಕಳಿಗೂ ಇಲ್ಲಿನ ವಾತಾವರಣ ಇಷ್ಟವಾಗಲಿದೆ.

ಮತ್ತಿಗೋಡು ಆನೆ ಶಿಬಿರದಲ್ಲಿ ಅತ್ಯಂತ ಕಿರಿಯದಾದ ಭುವನೇಶ್ವರಿ ಆನೆ ಎಲ್ಲರನ್ನು ಆಕರ್ಷಿಸುತ್ತಿದೆ.

Published by HT Digital Content Services with permission from H...