ಭಾರತ, ಮೇ 7 -- ಗುಜರಾತ್ ಟೈಟನ್ಸ್ ತಂಡವು ಪ್ರಸಕ್ತ ಐಪಿಎಲ್ ಆವೃತ್ತಿಯಲ್ಲಿ 8ನೇ ಗೆಲುವು ಸಾಧಿಸುವುದರೊಂದಿಗೆ ಪ್ಲೇಆಫ್ ಸುತ್ತಿಗೆ ಬಹುತೇಕ ಹತ್ತಿರವಾಗಿದೆ. ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ರೋಚಕವಾಗಿ ಗೆದ್ದ ತಂಡವು ಅಂಕಪಟ್ಟಿಯಲ್ಲಿಯೂ ಅಗ್ರಸ್ಥಾನಕ್ಕೇರಿದೆ. ಆ ಮೂಲಕ ಆರ್‌ಸಿಬಿ ತಂಡ ಎರಡನೇ ಸ್ಥಾನಕ್ಕೆ ಜಾರಿದೆ. ಮಳೆ ಅಡ್ಡಿಯಾದ ಪಂದ್ಯದಲ್ಲಿ ಕೊನೆಗೂ ಡಿಎಲ್‌ಎಸ್ ನಿಯಮದ ಪ್ರಕಾರ ಗುಜರಾತ್ ತಂಡಕ್ಕೆ 3 ವಿಕೆಟ್‌ಗಳ ರೋಚಕ ಗೆಲುವು ಒಲಿದಿದೆ. ಇದರೊಂದಿಗೆ ಮುಂಬೈಗೆ ಭಾರಿ ನಿರಾಶೆಯಾಗಿದೆ.
ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಮುಂಬೈ, 8 ವಿಕೆಟ್ ಕಳೆದುಕೊಂಡು 155 ರನ್ ಗಳಿಸಿತು. ಚೇಸಿಂಗ್ ನಡೆಸಿದ ಗುಜರಾತ್ 18 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 132 ರನ್ ಗಳಿಸಿತ್ತು. ಈ ವೇಳೆ ಜೋರಾಗಿ ಮಳೆ ಸುರಿಯಿತು. ಡಿಎಲ್‌ಎಸ್ ನಿಯಮದ ಪ್ರಕಾರ ಈ ಹಂತದಲ್ಲಿ ಗುಜರಾತ್ ತಂಡವು 4 ರನ್‌ಗಳಿಂದ ಹಿಂದಿತ್ತು. ಮಳೆ ನಿಂತ ಬಳಿಕ ಪಂದ್ಯವನ್ನು 19 ರನ್‌ಗಳಿಗೆ ಸೀಮಿತಗೊಳಿಸಲಾಯ್ತು. ಹೀಗಾಗಿ ಗುಜರಾತ್ ತ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.