ಭಾರತ, ಫೆಬ್ರವರಿ 25 -- ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಮಹತ್ವ ಎನಿಸಿಕೊಂಡಿದ್ದ ಪಂದ್ಯಗಳ ಪೈಕಿ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಕದನವೂ ಒಂದು. ಆದರೆ ಇಂದು (ಫೆ 25) ನಡೆಯಬೇಕಿದ್ದ ಉಭಯ ತಂಡಗಳ ನಡುವಿನ ಸೆಣಸಾಟಕ್ಕೆ ಮಳೆ ತಣ್ಣೀರೆರಚಿದೆ. ಎಡಬಿಡದೆ ಸುರಿದ ಭಾರೀ ಮಳೆಯ ಕಾರಣ ಟೂರ್ನಿಯ ಏಳನೇ ಹಾಗೂ ಆಸೀಸ್ ಮತ್ತು ಆಫ್ರಿಕನ್ನರ ನಡುವಿನ ಪಂದ್ಯ ಟಾಸ್ ಕಾಣದೆ ರದ್ದುಗೊಂಡಿದೆ. ಬಿ ಗುಂಪಿನಿಂದ ಸೆಮಿಫೈನಲ್ ಪ್ರವೇಶಿಸುವ ದೃಷ್ಟಿಯಿಂದ ಈ ಪಂದ್ಯ ಸಾಕಷ್ಟು ಕುತೂಹಲ ಕೆರಳಿಸಿತ್ತು.

ಭಾರತೀಯ ಕಾಲಮಾನ ಮಧ್ಯಾಹ್ನ 2ಕ್ಕೆ ಟಾಸ್ ಪ್ರಕ್ರಿಯೆ ನಡೆಯಬೇಕಿತ್ತು. ಆಗಷ್ಟೇ ಜಿಟಿಜಿಟಿ ಮಳೆ ಶುರುವಾಗಿತ್ತು. ಆದರೆ ಮಳೆ ನಿಲ್ಲಬಹುದು ಎಂದುಕೊಂಡಿದ್ದ ಪಂದ್ಯದ ಉಭಯ ತಂಡಗಳಿಗೆ ವರುಣ ಭಾರೀ ಆಘಾತವನ್ನೇ ನೀಡಿದ್ದಾನೆ. ಈ ಪಂದ್ಯದಲ್ಲಿ ಗೆದ್ದ ತಂಡವು ಸೆಮಿಫೈನಲ್ ಸ್ಥಾನವನ್ನು ಬಹುತೇಕ ಖಾತ್ರಿಪಡಿಸುತ್ತಿತ್ತು. ಇದೀಗ ತಲಾ ಒಂದೊಂದು ಪಡೆದು ಇಕ್ಕಟ್ಟಿಗೆ ಸಿಲುಕಿದ್ದು, ತಮಗೆ ಉಳಿದ ಒಂದು ಪಂದ್ಯದಲ್ಲಿ ಗೆಲ್ಲಲೇಬೇಕಾದ ಒತ್ತಡಕ್ಕೆ ಒ...