ಭಾರತ, ಏಪ್ರಿಲ್ 8 -- ಬೆಂಗಳೂರು: ಒಣಹವೆಯ ನಡುವೆಯೇ ಬೆಂಗಳೂರಿನಲ್ಲಿ ಮಳೆಯ ಮುನ್ಸೂಚನೆ ಕೂಡ ಸಿಕ್ಕಿದೆ. ಏಪ್ರಿಲ್ ಮೊದಲ ವಾರದಲ್ಲಿ ಬೆಂಗಳೂರಿನಲ್ಲಿ ಮಳೆ ಸುರಿದಿದ್ದು, ಬಿಸಿಲಿನ ತಾಪದಿಂದ ಪರಿಹಾರ ಸಿಕ್ಕಿದ್ದರೂ ವಿಪರ್ಯಾಸವೆಂಬಂತೆ ಅನೇಕ ಪ್ರದೇಶಗಳಲ್ಲಿ ನೀರು ನಿಂತಿತ್ತು. ನೀರು ನಿಂತ ಕಾರಣ ಸಂಚಾರ ವ್ಯವಸ್ಥೆ ಹಾಳಾಗಿ ಹೆಚ್ಚಿನ ವಾಹನ ದಟ್ಟನೆ ಉಂಟಾಗಿತ್ತು. ಸಾಕಷ್ಟು ನಾಗರಿಕರು ಫೋಟೋ ಹಂಚಿಕೊಳ್ಳುವ ಮೂಲಕ ಸರಿಯಾದ ವ್ಯವಸ್ಥೆ ಕಲ್ಪಿಸಲು ಬೇಡಿಕೆ ಇಟ್ಟಿದ್ದರು. ಪ್ರತಿ ವರ್ಷವೂ ಬೆಂಗಳೂರಿನಲ್ಲಿ ಇದೇ ಪರಿಸ್ಥಿತಿ ನಿರ್ಮಾಣವಾಗುತ್ತಿರುವ ಕುರಿತು ನಾಗರಿಕರು ಬೇಸರ ವ್ಯಕ್ತಪಡಿಸಿದ್ದಾರೆ. ಮಳೆಗಾಲಕ್ಕಾಗಿ ಮುಂಚಿತವಾಗಿ ಸಿದ್ಧತೆ ಬೇಕು ಎನ್ನುತ್ತಿದ್ದಾರೆ.

ಇನ್ನೇನು ಮಳೆಗಾಲ ಆರಂಭವಾಗುತ್ತದೆ ಎಂಬ ಸೂಚನೆ ಸಿಕ್ಕಾಗಲೇ ನಗರದ ಚರಂಡಿಗಳನ್ನು ಹೂಳು ಮುಕ್ತವಾಗಿಡಲು ಯೋಜನೆ ರೂಪಿಸಬೇಕು. ಚರಂಡಿಗಳಲ್ಲಿ ನೀರು ನಿಲ್ಲದಂತೆ ಕ್ರಮ ಕೈಗೊಂಡರೆ ಕೆಲ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ ಎನ್ನುತ್ತಿದ್ದಾರೆ. ಬೃಹತ್ ಬೆಂಗಳೂರು ಮಹಾನಗರ ಪಾಲ...