ಭಾರತ, ಮೇ 23 -- ಅಮೃತಧಾರೆ ಧಾರಾವಾಹಿಯ ಇಂದಿನ ಕಥೆ: ಜೈದೇವ್ ಮತ್ತು ದಿಯಾ ಮನೆಯಲ್ಲಿದ್ದಾರೆ. ಮನೆಯಿಂದ ಎಲ್ಲರೂ ಹೊರಗೆ ಹೋಗಿರುವುದನ್ನು ಬಳಸಿರುವ ಜೈದೇವ ತನ್ನ ಮನೆಗೆ ದಿಯಾಳನ್ನು ಕರೆಸಿಕೊಂಡಿದ್ದಾನೆ. ದಿಯಾಳ ಜತೆ ಚಕ್ಕಂದ ಆಡಲು ಮೋಹಿನಿ ಕಾಟ ಅಡ್ಡಿಪಡಿಸುತ್ತಿದೆ.
ಒಂದೆಡೆ ಗೌತಮ್ ದಿವಾನ್ ಮತ್ತು ಭೂಮಿಕಾ ಕನಕದುರ್ಗಾ ಗೆಸ್ಟ್ ಹೌಸ್‌ಗೆ ಹೋಗಿದ್ದಾರೆ. ಪಂಕಜಾಳ ರಹಸ್ಯ ತಿಳಿಯಲು ನಂಜಮ್ಮಳನ್ನು ಹುಡುಕಿಕೊಂಡು ಭೂಮಿಕಾ ಅಲ್ಲಿಗೆ ಹೋಗಿದ್ದಾರೆ. ಉಪಾಯವಾಗಿ ಅಲ್ಲಿಗೆ ಗೌತಮ್ ಕೂಡ ಬರುವಂತೆ ಮಾಡಿದ್ದಾರೆ ಭೂಮಿಕಾ ಮತ್ತು ಆನಂದ್.
ಶಕುಂತಲಾ ದೇವಿ ಮತ್ತು ಲಕ್ಕಿ ಲಕ್ಷ್ಮಿಕಾಂತ್ ಕೂಡ ಹೊರಗೆ ಹೋಗಿದ್ದಾರೆ. ಈ ಸಮಯದಲ್ಲಿ ಮಲ್ಲಿಯನ್ನೂ ಹೊರಗೆ ಕಳುಹಿಸಿದ್ದಾನೆ ಜೈದೇವ್. ಜೈದೇವನ ಬುದ್ದಿ ಗೊತ್ತಿರುವ ಮಲ್ಲಿ ವಾಪಸ್ ಬಂದಿದ್ದಾಳೆ.
ಜೈದೇವ್ ಮತ್ತು ದಿಯಾ ಮನೆಯೊಳಗಿನ ಜೋಕಾಲಿಯಲ್ಲಿ ಕುಳಿತಿದ್ದಾರೆ. ಆಗ ಜೈದೇವ್‌ಗೆ ಯಾಕೋ ಮಾಯಿಶ್ಚರ್ ಕ್ರೀಮ್ ಹಚ್ಚಬೇಕೆನಿಸಿದೆ. ಈಗ ಕ್ರೀಮ್ ತರುವೆ ಎಂದು ಹೋಗಿದ್ದಾನೆ.
ಆಗ ಅಲ್ಲಿ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.