ಭಾರತ, ಏಪ್ರಿಲ್ 24 -- ಚಾಮರಾಜನಗರ: ಕರ್ನಾಟಕದ ನಾನಾ ಜಿಲ್ಲೆಗಳು ಮಾತ್ರವಲ್ಲದೇ ತಮಿಳುನಾಡು, ಕೇರಳ, ಆಂಧ್ರದಿಂದಲೂ ಭಕ್ತಗಣ ಹೊಂದಿರುವ ಪ್ರಸಿದ್ದ ಧಾರ್ಮಿಕ ಹಾಗೂ ಪ್ರವಾಸಿ ತಾಣ ಮಲೈ ಮಹದೇಶ್ವರ ಬೆಟ್ಟದಲ್ಲಿ ಇನ್ನು ಮುಂದೆ ಮದ್ಯ ಪ್ರವೇಶಕ್ಕೂ ಅವಕಾಶವಿಲ್ಲ. ಈಗಾಗಲೇ ಬೆಟ್ಟದಲ್ಲಿ ಮದ್ಯಪಾನ ನಿಷೇಧಿಸಿದ್ದರೂ ಕೆಲವರು ಹೊರಗಿನಿಂದ ತಂದು ಸೇವಿಸುತ್ತಿದ್ದರು. ಈಗ ಅದಕ್ಕೂ ಬ್ರೇಕ್‌ ಹಾಕಲು ಕರ್ನಾಟಕ ಸರ್ಕಾರ ಕಟ್ಟು ನಿಟ್ಟಿನ ಸೂಚನೆಯನ್ನು ಚಾಮರಾಜನಗರ ಜಿಲ್ಲಾಡಳಿತ, ಪೊಲೀಸ್ ಇಲಾಖೆ, ಅಬಕಾರಿ ಇಲಾಖೆ ಹಾಗೂ ಮಹದೇಶ್ವರ ಬೆಟ್ಟ ಪ್ರಾಧಿಕಾರಕ್ಕೆ ಸೂಚನೆ ನೀಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಶ್ರೀ ಮಲೈ ಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಸಭೆಯಲ್ಲಿ ಪ್ರಮುಖ ಸೂಚನೆಗಳನ್ನು ನೀಡಲಾಗಿದೆ. ಅದರಲ್ಲಿ ಸ್ವಚ್ಚತೆಗೆ ಒತ್ತು ನೀಡುವುದು, ಲಾಡುವನ್ನು ಕಡಿಮೆ ಬೆಲೆಗೆ ಭಕ್ತರಿಗೆ ವಿತರಿಸುವುದು ಕೂಡ ಸೇರಿದೆ.

ಮಲೈ ಮಹದೇಶ್ವರ ಬೆಟ್ಟ ಇನ್ನು ಮುಂದೆ ಪಾನ ಮುಕ್ತ ಆಗಲಿದೆ. ಇಲ್ಲಿಯವರೆಗೂ ಬೆಟ್ಟ...