Mmhills, ಏಪ್ರಿಲ್ 24 -- ಚಾಮರಾಜನಗರ: ಬೆಂಗಳೂರಿನಿಂದ ಹೊರಗೆ ಆಯೋಜಿಸುವ ವಿಶೇಷ ಸಚಿವ ಸಂಪುಟ ಗುರುವಾರ ಚಾಮರಾಜನಗರದ ಗಡಿ ಭಾಗವಾಗಿರುವ ಹಾಗೂ ಪ್ರಸಿದ್ದ ಧಾರ್ಮಿಕ, ಪ್ರವಾಸಿ ತಾಣವಾದ ಮಲೈಮಹದೇಶ್ವರ ಬೆಟ್ಟದಲ್ಲಿ ಜರುಗಿತು. ಈ ಹಿಂದೆ ಕಲಬುರಗಿಯಲ್ಲಿ ಕಲಬುರಗಿ ವಿಭಾಗ ಮಟ್ಟದ ಸಚಿವ ಸಂಪುಟ ಸಭೆ ನಡೆದಿತ್ತು. ಈ ಬಾರಿ ಮೈಸೂರು ವಿಭಾಗದ ಮಟ್ಟದ ಸಚಿವ ಸಂಪುಟ ಸಭೆ ಮಲೈಮಹದೇಶ್ವರ ಬೆಟ್ಟದಲ್ಲಿ ನಡೆದು ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಲಾಯಿತು.ಅದರಲ್ಲೂ ಚಾಮರಾಜನಗರ ಹಾಗೂ ಮೈಸೂರು ಜಿಲ್ಲೆಗೆ ಹಲವು ಯೋಜನೆಗಳನ್ನು ಘೋಷಣೆ ಮಾಡಲಾಗಿದೆ. ಕಲ್ಬುರ್ಗಿ ವಿಭಾಗದ ಕ್ಯಾಬಿನೆಟ್ ಸಭೆ ಬಳಿಕ ಇಂದು ಮೈಸೂರು ವಿಭಾಗದ ಸಂಪುಟ ಸಭೆ ನಡೆಸಿದ್ದೇವೆ. ಇದೇ ರೀತಿ ಬೆಳಗಾವಿ ವಿಭಾಗದ ಸಂಪುಟ ಸಭೆ ವಿಜಯಪುರದಲ್ಲಿ, ಬೆಂಗಳೂರು ವಿಭಾಗದ ಸಭೆ ನಂದಿ ಬೆಟ್ಟದಲ್ಲಿ ನಡೆಯಲಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

Published by HT Digital Content Services with permission from HT Kannada....