Bengaluru, ಮಾರ್ಚ್ 28 -- L2: Empuraan Box office Day 1 Collection: ಭಾರೀ ನಿರೀಕ್ಷೆಗಳ ನಡುವೆ ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾದ (ಮಾ. 27), ಮೋಹನ್‌ ಲಾಲ್‌ ನಟನೆಯ ಮಲಯಾಳಂ ಆಕ್ಷನ್ ಥ್ರಿಲ್ಲರ್ ಚಿತ್ರ L2: ಎಂಪುರಾನ್. ಪೃಥ್ವಿರಾಜ್ ಸುಕುಮಾರನ್ ನಿರ್ದೇಶನದ ಈ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆಗಳು ಬಂದಿದ್ದರೂ, ಮೊದಲ ದಿನದ ಬಾಕ್ಸ್ ಆಫೀಸ್ ಕಲೆಕ್ಷನ್‌ ವಿಚಾರದಲ್ಲಿ ಹೊಸ ದಾಖಲೆ ಬರೆದಿದೆ. ಇದು ಭಾರತದಲ್ಲಿ ಮೊದಲ ದಿನವೇ 21 ಕೋಟಿ ಗಳಿಕೆ ಮಾಡಿದ ಮಾಲಿವುಡ್‌ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದು ಈ ವರೆಗೂ ಬೇರಾವ ಮಲಯಾಳಂ ಚಿತ್ರಕ್ಕೂ ಸಾಧ್ಯವಾಗಿರಲಿಲ್ಲ. ಅಂಥದ್ದೊಂದು ಹೊಸ ರೆಕಾರ್ಡ್‌ ಮಾಡಿದೆ ಎಂಪುರಾನ್‌ ಸಿನಿಮಾ.

ಕಡಿಮೆ ಬಜೆಟ್‌, ಅತ್ಯಧಿಕ ಗಳಿಕೆ; ಇದು ಮಲಯಾಳಂ ಸಿನಿಮಾಗಳ ಗುಣ. ದಶಕಗಳಿಂದಲೂ ಇದು ಚಾಲ್ತಿಯಲ್ಲಿದೆ. ಆಫ್‌ಬೀಟ್‌ ಸಿನಿಮಾಗಳ ಸಂಖ್ಯೆಯೇ ಅಲ್ಲಿ ಅಧಿಕ. ಆದರೆ, ಇತ್ತೀಚಿನ ದಿನಗಳಲ್ಲಿ ಆ ಎಲ್ಲ ಗಡಿಯನ್ನು ದಾಟಿ, ಕಮರ್ಷಿಯಲ್‌ ಮೇಕಿಂಗ್‌ನತ್ತಲೂ ಮಲಯಾಳಿಗಳು ಹೊರಳಿದ್ದಾರೆ....