ಭಾರತ, ಏಪ್ರಿಲ್ 28 -- ಭಾರತೀಯ ಅಡುಗೆಮನೆಯಲ್ಲಿ ಸಾಮಾನ್ಯವಾಗಿ ದೇಸಿ ತುಪ್ಪ ಇದ್ದೇ ಇರುತ್ತದೆ. ಇದು ಆಹಾರಗಳಿಗೆ ರುಚಿ ನೀಡುವ ಜೊತೆಗೆ ಆರೋಗ್ಯಕ್ಕೂ ಉತ್ತಮ. ಆ ಕಾರಣಕ್ಕೆ ಖಾದ್ಯಗಳನ್ನು ತಯಾರಿಸುವಾಗ ತುಪ್ಪ ಬಳಸುತ್ತಾರೆ. ಆದರೆ ಇದರ ಸೇವನೆ ಮಾತ್ರವಲ್ಲ ಇದನ್ನು ಮೂಗಿಗೆ ಬಿಟ್ಟುಕೊಳ್ಳುವುದರಿಂದ ಕೂಡ ಸಾಕಷ್ಟು ಪ್ರಯೋಜನಗಳಿವೆ. ರಾತ್ರಿ ಮಲಗುವ ಮುನ್ನ ಅಥವಾ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದೆರಡು ಹನಿ ದೇಸಿ ತುಪ್ಪವನ್ನು ಮೂಗಿಗೆ ಬಿಟ್ಟುಕೊಳ್ಳಬೇಕು. ಇದರಿಂದ ಏನೆಲ್ಲಾ ಪ್ರಯೋಜನಗಳಿವೆ ನೋಡಿ.

ಇತ್ತೀಚಿನ ದಿನಗಳಲ್ಲಿ, ಅತಿಯಾದ ಒತ್ತಡದಿಂದಾಗಿ ನಿರಂತರ ತಲೆನೋವಿನ ಸಮಸ್ಯೆ ಜನರಲ್ಲಿ ಸಾಮಾನ್ಯವಾಗಿದೆ. ಅನೇಕ ಜನರಿಗೆ ಮೈಗ್ರೇನ್ ಸಮಸ್ಯೆಯೂ ಇರುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ನೀವು ಪ್ರತಿದಿನ ಮೂಗಿಗೆ ಎರಡು ಹನಿ ದೇಸಿ ತುಪ್ಪವನ್ನು ಹಾಕಿಕೊಂಡರೆ, ತಲೆನೋವಿನಂತಹ ಸಮಸ್ಯೆಗಳಿಂದ ಪರಿಹಾರ ಪಡೆಯಬಹುದು.

ಅತಿಯಾದ ಒತ್ತಡ ಅಥವಾ ಅತಿಯಾಗಿ ಯೋಚಿಸುವುದರಿಂದ ಹಲವರಿಗೆ ರಾತ್ರಿ ಹೊತ್ತು ಚೆನ್ನಾಗಿ ನಿದ್ದೆ ಮಾಡಲು ಸಾಧ್ಯವಾಗುವುದ...