ಭಾರತ, ಮಾರ್ಚ್ 14 -- ಪ್ರಸ್ತುತ ಇಂಟರ್​ನ್ಯಾಷನಲ್ ಮಾಸ್ಟರ್ಸ್ ಲೀಗ್ ಆಡುತ್ತಿರುವ ಭಾರತದ ಮಾಜಿ ಕ್ರಿಕೆಟಿಗರು ಹೋಳಿ ಸಂಭ್ರಮದಲ್ಲಿ ಮಿಂದೆದ್ದಿದ್ದಾರೆ. ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಶುಕ್ರವಾರ ತಮ್ಮ ತಂಡದ ಸಹ ಆಟಗಾರರೊಂದಿಗೆ ಹೋಳಿ ಆಡಿರುವ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಇದರಲ್ಲಿ ಅವರು ಯುವರಾಜ್ ಸಿಂಗ್ ಅವರೊಂದಿಗೆ ತಮಾಷೆ ಮಾಡುತ್ತಿರುವುದನ್ನು ಕಾಣಬಹುದು.

ಭಾರತದ ಮಾಜಿ ಕ್ರಿಕೆಟಿಗರು ಪ್ರಸ್ತುತ ಇಂಟರ್​ನ್ಯಾಷನಲ್ ಮಾಸ್ಟರ್ಸ್ ಲೀಗ್ (IML) ಕ್ರಿಕೆಟ್ ಪಂದ್ಯಾವಳಿ ಆಡುತ್ತಿದ್ದಾರೆ. ಇಂಡಿಯಾ ಮಾಸ್ಟರ್ಸ್​ ತಂಡವು ಸೆಮಿಫೈನಲ್​ನಲ್ಲಿ ಆಸ್ಟ್ರೇಲಿಯಾವನ್ನು ಮಣಿಸಿ ಫೈನಲ್​ಗೇರಿದೆ. ಇಂಡಿಯಾ ಮಾಸ್ಟರ್ಸ್ ತಂಡಕ್ಕೆ ಸಚಿನ್ ನಾಯಕತ್ವ ವಹಿಸಿದ್ದಾರೆ. ಫೈನಲ್ ಪ್ರವೇಶಿಸಿದ ಖುಷಿಯಲ್ಲಿರುವ ಸಚಿನ್​ ಹೋಳಿ ದಿನದಂದು ವಿಶ್ರಾಂತಿ ಪಡೆಯುತ್ತಿದ್ದ ಯುವರಾಜ್​ಗೆ ಹೋಳಿ ಸುರಿದಿದ್ದಾರೆ.

ಅಂಬಟಿ ರಾಯುಡು, ಯೂಸುಫ್ ಫಠಾಣ್‌, ಸಚಿನ್ ತೆಂಡೂಲ್ಕರ್ ಸೇರಿದಂತೆ ತಂಡದ ಆಟಗಾರರು ಒಟ್ಟಾಗಿ ಪರಸ್ಪರ ಬಣ್...