ಭಾರತ, ಫೆಬ್ರವರಿ 22 -- ಕರ್ನಾಟಕದಲ್ಲಿ ಪರೀಕ್ಷೆ ಬರೆಯುವ ಎಸ್‌ಎಸ್‌ಎಸ್‌ಎಲ್‌ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ಕನ್ನಡ ಪ್ರಮುಖ ಭಾಷೆ. ಇದು ಹೆಚ್ಚು ಅಂಕ ಗಳಿಸಬಹುದಾದ ವಿಷಯವೂ ಹೌದು. ಕನ್ನಡ ಅಂತಿಮ ಪರೀಕ್ಷೆಯು ಗರಿಷ್ಠ 100 ಅಂಕಗಳಿಗೆ ನಡೆಯುತ್ತದೆ. ಭಾಷೆಯ ಮೇಲೆ ಹಿಡಿತ ಇರುವವರು ಇಲ್ಲಿ ನೂರಕ್ಕೆ ನೂರು ಅಂಕಗಳನ್ನು ಗಳಿಸಬಹುದು. ಕನ್ನಡದಲ್ಲಿ ವಿಷಯದ ಪ್ರಶ್ನೆಗಳ ಜೊತೆಗೆ ಕನ್ನಡ ವ್ಯಾಕರಣಕ್ಕೆ ಸಂಬಂಧಿಸಿದ ಪ್ರಶ್ನೆಗಳೂ ಇರುತ್ತವೆ. ಇದರೊಂದಿಗೆ ಗಾದೆ ಮಾತು, ಪ್ರಬಂಧ, ಪತ್ರ, ಪದ್ಯಭಾಗ ಹೀಗೆ ವಿವಿಧ ಪ್ರಶ್ನೆಗಳಿಗೆ ಸುದೀರ್ಘ ಉತ್ತರ ಬರೆದು ಹೆಚ್ಚು ಅಂಕಗಳನ್ನು ಕಲೆ ಹಾಕಬಹುದು.

ಕನ್ನಡ ಸುಲಭ ಎಂದು ಹೇಳಿದರೂ, ಈ ವಿಷಯದಲ್ಲೂ ಹಲವು ವಿದ್ಯಾರ್ಥಿಗಳು ಫೇಲ್‌ ಆಗುವ ಸಾಧ್ಯತೆಗಳಿರುತ್ತದೆ. ಈ ಹಿಂದಿನ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆ ಸಮಯದಲ್ಲಿ ಹಲವು ವಿದ್ಯಾರ್ಥಿಗಳು ಅನುತ್ತೀರ್ಣರಾದ ನಿದರ್ಶನಗಳಿವೆ. ಕಳೆದ ಬಾರಿಯ ಹತ್ತನೇ ತರಗತಿ ಪರೀಕ್ಷೆಯಲ್ಲಿ ಮಂಡ್ಯ ಜಿಲ್ಲೆ ಒಂದರಲ್ಲೇ 3571 ವಿದ್ಯಾರ್ಥಿಗಳು ಫೇಲ್‌ ಆಗಿದ್...