ಭಾರತ, ಜೂನ್ 18 -- ಭೂಮಿಯ ಮೇಲೆ ಹುಟ್ಟಿದ ಪ್ರತಿಯೊಬ್ಬ ವ್ಯಕ್ತಿಯು ಒಂದು ದಿನ ಈ ಭೂಮಿಯನ್ನು ಬಿಟ್ಟು ಹೊರಡಲೇಬೇಕು. ಸಾವು ಪ್ರತಿಯೊಬ್ಬರ ಜೀವನದಲ್ಲೂ ನಿಶ್ಚಿತ. ಎಲ್ಲಾ ಧರ್ಮದಲ್ಲೂ ಸಾವಿನ ನಂತರವೂ ಅನೇಕ ಸಂಪ್ರದಾಯಗಳನ್ನು ಅನುಸರಿಸಲಾಗುತ್ತದೆ. ಹಿಂದೂ ಧರ್ಮದಲ್ಲಿ ವ್ಯಕ್ತಿಯ ಹುಟ್ಟಿನಿಂದ ಸಾವಿನವರೆಗೆ ಹಲವಾರು ವಿಧಿ, ಪದ್ಧತಿಗಳ ಆಚರಣೆಯಿರುತ್ತದೆ. ಸಾವಿರಾರು ವರ್ಷಗಳಿಂದ ನಡೆದುಕೊಂಡು ಬಂದ ಈ ಪದ್ಧತಿಗಳಿಗೆ ಅದರದೇ ಆದ ಕಾರಣಗಳೂ ಇವೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮರಣದ ನಂತರ ಕೆಲವು ಆಚರಣೆಗಳನ್ನು ಪಾಲಿಸುತ್ತಾರೆ. ಅವುಗಳಲ್ಲಿ ಸತ್ತ ವ್ಯಕ್ತಿಯ ಬಾಯಿಯಲ್ಲಿ ತುಳಸಿ ಎಲೆ ಮತ್ತು ಗಂಗಾ ಜಲವನ್ನು ಹಾಕುವುದು ಒಂದಾಗಿದೆ. ಇದರ ಹಿಂದಿನ ಕಾರಣವೇನು ಎಂದು ತಿಳಿಯೋಣ.

ಯಾವುದೇ ಪೂಜೆಯನ್ನು ಮಾಡುವಾಗ, ಪೂಜಾ ಸಾಮಗ್ರಿಗಳ ಮೇಲೆ ಮತ್ತು ಭಕ್ತರ ಮೇಲೆ ನೀರನ್ನು ಸಿಂಪಡಿಸಿ ಶುದ್ದೀಕರಿಸಲಾಗುತ್ತದೆ. ಹಿಂದೂ ಧರ್ಮದಲ್ಲಿ ಗಂಗಾ ನೀರನ್ನು ಪವಿತ್ರವೆಂದು ಪರಿಗಣಿಸಲಾಗಿದೆ. ಇದನ್ನು ಅಮೃತಕ್ಕೆ ಸಮಾನವೆಂದೂ ಹೇಳಲಾಗುತ್ತದೆ. ಗಂಗೆಯನ್ನು "...