ಭಾರತ, ಏಪ್ರಿಲ್ 15 -- ಅಗ್ನಿಸಾಕ್ಷಿ, ಸೀತಾರಾಮ ಧಾರಾವಾಹಿ ಖ್ಯಾತಿಯ ನಟಿ ವೈಷ್ಣವಿ ಗೌಡ ಸದ್ದಿಲ್ಲದೇ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದಾರೆ. ಮನ ಮೆಚ್ಚಿದ ಹುಡುಗ ಅನುಕೂಲ್ ಮಿಶ್ರಾ ಜೊತೆ ಉಂಗುರ ಬದಲಿಸಿಕೊಳ್ಳುವ ಮೂಲಕ ಒಂಟಿ ಬದುಕಿಗೆ ಗುಡ್‌ ಬೈ ಹೇಳಿದ್ದಾರೆ. ವಾಯುಪಡೆಯಲ್ಲಿ ಕೆಲಸ ಮಾಡುವ ಅನುಕೂಲ್ ಮಿಶ್ರಾ ಕೈ ಹಿಡಿಯಲಿದ್ದಾರೆ ಕನ್ನಡ ಕಿರುತೆರೆಯ ಸೀತಾ.

ವೈಷ್ಣವಿ-ಅನುಕೂಲ್‌ ಜೋಡಿಯ ನಿಶ್ಚಿತಾರ್ಥ ಬೆಂಗಳೂರಿನಲ್ಲಿ ಬಹಳ ಅದ್ಧೂರಿಯಾಗಿ ನೆರವೇರಿತು. ಅನುಕೂಲ್ ಹಾಗೂ ವೈಷ್ಣವಿ ಒಬ್ಬರನ್ನೊಬ್ಬರು ಇಷ್ಟಪಟ್ಟು ಪೋಷಕರ ಒಪ್ಪಿಗೆ ಪಡೆದು ಮದುವೆಯಾಗುತ್ತಿದ್ದಾರೆ ಎನ್ನಲಾಗುತ್ತಿದೆ. ಈ ಜೋಡಿಯ ನಿಶ್ಚಿತಾರ್ಥದಲ್ಲಿ ನಟಿ ಅಮೂಲ್ಯ ಕುಟುಂಬ, ಅಗ್ನಿಸಾಕ್ಷಿ ಹಾಗೂ ಸೀತಾರಾಮ ಧಾರಾವಾಹಿಯ ನಟ-ನಟಿಯರು ಭಾಗವಹಿಸಿದ್ದರು.

ಅಗ್ನಿಸಾಕ್ಷಿ ಧಾರಾವಾಹಿ ಮೂಲಕ ಸಾಕಷ್ಟು ಖ್ಯಾತಿ ಗಳಿಸಿದ ವೈಷ್ಣವಿ ಗೌಡ ಎಂಗೇಜ್‌ಮೆಂಟ್‌ನಲ್ಲಿ ಅಗ್ನಿಸಾಕ್ಷಿ ಧಾರಾವಾಹಿಯಲ್ಲಿ ನಟಿಸಿದ್ದ ಪ್ರಮುಖರು ಭಾಗವಹಿಸಿದ್ದರು. ಚಿತ್ಕಾಲಾ ಬಿರಾದಾರ್‌, ಇಶಿತಾ ವರ್ಷ, ಮುಖ್ಯ...