Bengaluru, ಫೆಬ್ರವರಿ 12 -- Suvarna Gruha Mantri: ಕನ್ನಡದ ಮನರಂಜನಾ ವಾಹಿನಿ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಸುವರ್ಣ ಗೃಹಮಂತ್ರಿ' ಎಂಬ ಫ್ಯಾಮಿಲಿ ರಿಯಾಲಿಟಿ ಶೋ ಪ್ರೇಕ್ಷಕರ ಮನಗೆದ್ದು ಯಶಸ್ವಿಯಾಗಿ ಮುನ್ನುಗ್ಗುತ್ತಿದೆ. ಇನ್ಮುಂದೆ ಹೊಸ ಸೀಸನ್ ಮೂಲಕ ಮತ್ತಷ್ಟು ಮನರಂಜನೆಯ ಮೆರುಗು ನೀಡಲು ಸಜ್ಜಾಗಿದೆ 'ಸುವರ್ಣ ಗೃಹಮಂತ್ರಿ ಸೀಸನ್ 2'.

ಈ ಹಿಂದೆ ಸಾವಿರಕ್ಕೂ ಹೆಚ್ಚು ಸಂಚಿಕೆಗಳೊಂದಿಗೆ ಪ್ರಸಾರವಾಗಿದ್ದ'ಸುವರ್ಣ ಸೂಪರ್ ಸ್ಟಾರ್' ಕಾರ್ಯಕ್ರಮದ ಮೂಲಕ ಕರ್ನಾಟಕದಾದ್ಯಂತ ಮನೆಮಾತಾಗಿದ್ದ ನಟಿ, ನಿರೂಪಕಿ ಶಾಲಿನಿ ಇದೀಗ ಮತ್ತೆ ಸುವರ್ಣ ವಾಹಿನಿಗೆ ಕಮ್ ಬ್ಯಾಕ್ ಆಗಿದ್ದು ಇನ್ಮುಂದೆ 'ಸುವರ್ಣ ಗೃಹಮಂತ್ರಿ'ಯ ನಿರೂಪಣೆಯ ಜವಾಬ್ದಾರಿಯನ್ನು ಹೊರಲಿದ್ದಾರೆ. ನಿಮ್ಮ ಮನೆಮಗಳು ಶಾಲಿನಿ ಇದೇ ಫೆಬ್ರವರಿ 17ರ ಸಂಜೆ 5 ಗಂಟೆಯಿಂದ ಮತ್ತೆ ನಿಮ್ಮ ಮನೆ ಮನೆಗೆ ಬರ್ತಿದ್ದಾರೆ.

ಸುವರ್ಣ ಗೃಹಮಂತ್ರಿ 'ಸೀಸನ್ 2' ಪ್ರೋಮೋದಲ್ಲಿ ಶಾಲಿನಿಯನ್ನು ನೋಡಿದ ವೀಕ್ಷಕರು ಸಾಮಾಜಿಕ ಜಾಲತಾಣದಲ್ಲಿ ಸಂತಸವನ್ನು ವ್ಯಕ್ತಪಡಿಸು...