Bengaluru, ಏಪ್ರಿಲ್ 21 -- ಕನ್ನಡ ಕಿರುತೆರೆಯ ಜನಪ್ರಿಯ ಶೋ ಸರಿಗಮಪ ಮೂಲಕ ಹೆಚ್ಚು ಜನಪ್ರಿಯತೆ ಪಡೆದು, ಸಿನಿಮಾ, ಸೀರಿಯಲ್‌, ವೇದಿಕೆ ಕಾರ್ಯಕ್ರಮಗಳಲ್ಲಿಯೂ ಹಾಡಿನ ಮೂಲಕ ಗಮನ ಸೆಳೆದವರು ಗಾಯಕಿ ಪೃಥ್ವಿ ಭಟ್.‌ ಇದೀಗ ಇದೇ ಗಾಯಕಿ ಮನೆ ಬಿಟ್ಟು ಓಡಿ ಹೋಗಿ ಮದುವೆಯಾಗಿದ್ದಾರೆ ಎಂದು ಅವರ ತಂದೆ ಶಿವಪ್ರಸಾದ್‌ ಭಟ್‌ ಆರೋಪ ಮಾಡಿದ್ದಾರೆ. ಮಗಳ ಬಗ್ಗೆ ಸುದೀರ್ಘವಾದ ಆಡಿಯೋ ರೆಕಾರ್ಡ್‌ ಮಾಡಿರುವ ಶಿವಪ್ರಸಾದ್‌, ಇದರ ಹಿಂದೆ ಯಾರಿದ್ದಾರೆ ಎಂಬಿತ್ಯಾದಿ ಮಾಹಿತಿಯನ್ನು ಹೇಳಿಕೊಂಡಿದ್ದಾರೆ.

ಕಾಸರಗೋಡು ಮೂಲದ ಪೃಥ್ವಿ ಭಟ್‌ ಕಳೆದ 20 ದಿನಗಳ ಹಿಂದೆ ಅಭಿಷೇಕ್‌ ಎಂಬುವವರ ಜತೆಗೆ ಓಡಿ ಹೋಗಿ, ಆತನ ಜತೆಗೆ ದೇವಸ್ಥಾನವೊಂದರಲ್ಲಿ ಮದುವೆಯಾಗಿದ್ದಾಳೆ ಎಂದು ತಂದೆ ಶಿವಪ್ರಸಾದ್‌ ಆರೋಪಿಸಿದ್ದಾರೆ. ಪೃಥ್ವಿ ಮತ್ತು ಅಭಿಷೇಕ್‌ ನಡುವಿನ ಪ್ರೀತಿ ಮನೆಯಲ್ಲಿ ಮೊದಲೇ ಗೊತ್ತಿತ್ತು. ಗೊತ್ತಾಗುತ್ತಿದ್ದಂತೆ, ದೇವರ ಮುಂದೆ ಪ್ರಮಾಣ ಮಾಡಿಸಿ, ನಾನು ಅಭಿಷೇಕ್‌ನನ್ನು ಮದುವೆ ಆಗಲ್ಲ ಎಂದಿದ್ದಳು ಪೃಥ್ವಿ.

ಇದನ್ನೂ ಓದಿ: ರಿಯಾಲಿಟಿ ಶೋನಲ್ಲಿ ಇಂಥ ಮುಜ...