Bengaluru, ಮಾರ್ಚ್ 2 -- Bhagyalakshmi Serial: ಭಾಗ್ಯಲಕ್ಷ್ಮೀ ಧಾರಾವಾಹಿಯ ಶನಿವಾರ ಮಾರ್ಚ್ 1ರ ಸಂಚಿಕೆಯಲ್ಲಿ ಭಾಗ್ಯ ಮನೆ ಉಳಿಸಿಕೊಳ್ಳಲು ಇನ್ನಿಲ್ಲದ ಪ್ರಯತ್ನ ನಡೆಸಿದ್ದಾಳೆ. ಭಾಗ್ಯ ಕೆಲಸ ಮಾಡುವ ರೆಸಾರ್ಟ್‌ ಮ್ಯಾನೇಜರ್ ಬಳಿ ಭಾಗ್ಯ ಹೋಗಿ ಸ್ವಲ್ಪ ಅಡ್ವಾನ್ಸ್ ಹಣ ಬೇಕಾಗಿತ್ತು, ಸಾಲ ಎಂದು ಕೊಡಿ, ಅದನ್ನು ಬಡ್ಡಿ ಸಮೇತ ನಾನು ತೀರಿಸುತ್ತೇನೆ, ದಯವಿಟ್ಟು ಇಲ್ಲ ಅನ್ನಬೇಡಿ, ಹೇಗಾದರೂ ಮಾಡಿ, ಹಣ ಕೊಡಿ, ಅದನ್ನು ತಪ್ಪದೇ ಹಿಂದಿರುಗಿಸುತ್ತೇನೆ ಎಂದು ಹೇಳುತ್ತಾಳೆ. ಆದರೆ ಮ್ಯಾನೇಜರ್ ಹಣ ಕೊಡಲು ಒಪ್ಪುವುದಿಲ್ಲ, ಹೀಗಾಗಿ ಭಾಗ್ಯ ಪೆಚ್ಚು ಮೋರೆ ಹಾಕಿಕೊಂಡು ಮನೆಗೆ ಮರಳುತ್ತಾಳೆ. ಮನೆಗೆ ಮರಳುತ್ತಲೇ, ಅಲ್ಲಿ ಮತ್ತೊಂದು ಸಂಕಷ್ಟ ಭಾಗ್ಯಗೆ ಎದುರಾಗಿದೆ.

ಮನೆ ಉಳಿಸಿಕೊಳ್ಳಲು ಉಳಿತಾಯದ ಹಣವನ್ನು ಬ್ಯಾಂಕ್‌ನಿಂದ ಡ್ರಾ ಮಾಡಿ ಹೊರಗೆ ಬಂದ ಧರ್ಮರಾಜ್, ಹಣದ ಚೀಲವನ್ನು ಕೈಯಲ್ಲಿ ಹಿಡಿದುಕೊಂಡು, ಇನ್ನೇನು ಮನೆಗೆ ತೆರಳಬೇಕು ಎಂದುಕೊಳ್ಳುವಷ್ಟರಲ್ಲಿ, ಯಾರೋ ಖದೀಮರು ಹಣದ ಚೀಲವನ್ನು ಧರ್ಮರಾಜ್ ಕೈಯಿಂದ ಎಗರಿಸಿದ್ದಾರೆ. ಧರ್ಮರಾ...