ಭಾರತ, ಫೆಬ್ರವರಿ 1 -- ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಜನವರಿ 31ರ ಸಂಚಿಕೆಯಲ್ಲಿ ಲಲಿತಾದೇವಿ ಜೊತೆ ಮಾತನಾಡುತ್ತಿರುವ ವಂದನಾ ಅವರ ಮಾತನ್ನು ಕೇಳಿಸಿಕೊಂಡು ತನಗೆ ಶ್ರಾವಣಿ ಹಾಗೂ ಸುಬ್ಬು ಪ್ರೀತಿಸುತ್ತಿರುವುದು ಮೊದಲೇ ಗೊತ್ತಿತ್ತು, ಆದರೆ ನಾವೆಷ್ಟೇ ಕೇಳಿದ್ರು ಅವಳು ಈ ಮದುವೆಗೆ ಒಪ್ಪಿಗೆ ಇದೆ ಅಂತಾನೇ ಹೇಳಿದ್ಲು, ಅವಳು ಮದನ್‌ನನ್ನು ಮದುವೆಯಾಗುವ ವಿಚಾರದಲ್ಲಿ ತಪ್ಪು ತಿಳಿದುಕೊಂಡಿದ್ದಳು. ಈಗ ಅವಳು ತಾನು ಪ್ರೀತಿಸುತ್ತಿರುವ ಹುಡುಗನನ್ನೇ ಮದುವೆ ಆಗಿದ್ದಾಳೆ ಅಲ್ವಾ ಅಂತ ಕೇಳಿ ಶಾಕ್ ನೀಡುತ್ತಾಳೆ. ಲಲಿತಾದೇವಿ ಮಾತ್ರ ಮೊಮ್ಮಗಳು ಎಲ್ಲೇ ಇದ್ರೂ ಆರಾಮಾಗಿರಲಿ ಎಂದು ಬೇಡಿಕೊಳ್ಳುತ್ತಾರೆ.

ಶ್ರಾವಣಿಯಿಂದಾಗಿ ತನ್ನ ಮಗಳ ಹಾಳು ಹಾಳಾಯ್ತು ಎಂದು ಕೋಪಗೊಂಡಿರುವ ವಿಶಾಲಾಕ್ಷಿ ಶ್ರಾವಣಿ ಬಗ್ಗೆ ಬಾಯಿಗೆ ಬಂದಿದ್ದು ಮಾತನಾಡುತ್ತಾಳೆ. ಶ್ರಾವಣಿಗೆ ಬಯ್ಯುತ್ತಾ ಕೋಪ ಹೊರ ಹಾಕುವ ವಿಶಾಲಾಕ್ಷಿ, ಧನಲಕ್ಷ್ಮೀ ಸುಬ್ಬು ಮೇಲೂ ಕೋಪ ತೋರುತ್ತಾರೆ. ಯಾವುದೇ ಕಾರಣಕ್ಕೂ ಶ್ರಾವಣಿಯನ್ನು ಈ ಮನೆಗೆ ಸೇರಿಸುವುದಿಲ್ಲ ಎಂದು ವಿಶಾಲಾಕ್ಷಿ ಹೇಳು...