Bengaluru, ಏಪ್ರಿಲ್ 5 -- Lakshmi Nivasa Serial: ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಶುಕ್ರವಾರ ಏಪ್ರಿಲ್ 4ರ ಸಂಚಿಕೆಯಲ್ಲಿ ಮನೆಯವರು ಒಬ್ಬೊಬ್ಬರಾಗಿ ಜಯಂತ್‌ ಬಳಿ ಪ್ರಶ್ನೆಗಳ ಸುರಿಮಳೆ ಸುರಿಸಿದ್ದಾರೆ. ಜಾಹ್ನವಿಗೆ ಏನಾಯಿತು ಮತ್ತು ಹೇಗೆ ಅವಳು ನೀರಿಗೆ ಬೀಳಲು ಸಾಧ್ಯ ಎಂದು ಪ್ರಶ್ನಿಸಿದ್ದಾರೆ. ಸಂತೋಷ್ ಕೂಡ, ನೀವು ಜಾಹ್ನವಿಯನ್ನು ಅಷ್ಟು ಇಷ್ಟಪಡುತ್ತೀರಿ, ಅವಳ ಬಗ್ಗೆ ಕೇರ್ ಮಾಡುತ್ತೀರಿ, ಹಾಗಿರುವಾಗ ನಿಮಗೆ ಹೇಗೆ ಅವಳನ್ನು ಅಷ್ಟು ಸುಲಭದಲ್ಲಿ ಬಿಟ್ಟಿರಲು ಸಾಧ್ಯವಾಯಿತು, ಅವಳ ಜೊತೆಗೇ ನೀವು ಇದ್ದಿರಲ್ಲವೇ ಎಂದು ಕೇಳುತ್ತಾನೆ. ಅದನ್ನು ಕೇಳಿ ಜಯಂತ್‌ಗೆ ಹೆದರಿಕೆಯಾಗುತ್ತದೆ. ಎಲ್ಲಿ ಮನೆಯವರಿಗೆ ನಿಜ ಸಂಗತಿ ಗೊತ್ತಾಗುವುದೋ ಎಂದು ಅವನು ಹೆದರಿಕೊಳ್ಳುತ್ತಾನೆ. ಕೂಡಲೇ ಕಥೆ ಬದಲಾಯಿಸುತ್ತಾನೆ.

ಜಾಹ್ನವಿಯನ್ನು ನಾನು ಕೈಯಾರೆ ಕಳೆದುಕೊಂಡೆ, ಅವಳಿಲ್ಲದ ಒಂದು ಕ್ಷಣವನ್ನೂ ನನಗೆ ಊಹಿಸಲೂ ಸಾಧ್ಯವಿಲ್ಲ ಎಂದು ಮನೆಯವರ ಅನುಕಂಪ ಗಿಟ್ಟಿಸಲು ಯತ್ನಿಸುತ್ತಿದ್ದಾನೆ. ನಂತರ ನಿಮ್ಮೆಲ್ಲರಿಗಿಂತಲೂ ಜಾಹ್ನವಿಯನ್ನು ನಾನು ಸ್ವಲ...