ಭಾರತ, ಫೆಬ್ರವರಿ 13 -- ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಫೆಬ್ರುವರಿ 12ರ ಸಂಚಿಕೆಯಲ್ಲಿ ಬೆಳಿಗ್ಗೆ ಮನೆಯವರೆಲ್ಲರೂ ಏಳುವ ಮೊದಲೇ ಎದ್ದ ಶ್ರಾವಣಿ ಮನೆಗೆಲಸವನ್ನೆಲ್ಲಾ ಮಾಡಿ, ಸ್ನಾನ ಮಾಡಿ, ದೇವರ ಪೂಜೆ ಮಾಡಿ, ಬೆಳಿಗ್ಗೆಗೆ ತಿಂಡಿ, ಕಾಫಿಯನ್ನು ಕೂಡ ಮಾಡಿರುತ್ತಾಳೆ. ಮಾವ ಎದ್ದು ಬಂದಾಗ ಅವರಿಗೆ ಕಾಫಿ ಕೊಟ್ಟು ನೀವು ಈ ಮನೆಯ ಯಜಮಾನ ಎಂದು ಹೇಳಿ ಹಾಲ್‌ನಲ್ಲಿ ಕುಳಿತುಕೊಳ್ಳಲು ಹೇಳುತ್ತಾಳೆ. ಎದ್ದು ಬಂದ ವಿಶಾಲಾಕ್ಷಿಗೆ ಮನೆಯೆಲ್ಲಾ ಗುಡಿಸಿ ಒರೆಸಿ ಇರುವುದು ನೋಡಿ ಶಾಕ್ ಆಗುತ್ತದೆ. ದೇವರ ಪೂಜೆ ಆಗಿರುವುದು ನೋಡಿ ಹೆಣ್ಣುಮಕ್ಕಳನ್ನು ಕರೆದು ಇದೆಲ್ಲಾ ಯಾರು ಮಾಡಿದ್ದು ಕೇಳುತ್ತಾರೆ. ಶ್ರಾವಣಿಯೇ ಮಾಡಿದ್ದು ಎಂದು ಗೊತ್ತಾದಾಗ ಉರಿದು ಬೀಳುತ್ತಾರೆ. ಆದರೆ ಶ್ರಾವಣಿಗೆ ಮಾತ್ರ ತಾನು ಹೀಗೆಲ್ಲಾ ಮಾಡಿ ಮನೆಯವರನ್ನು ಒಲಿಸಿಕೊಳ್ಳಬಹುದು ಎಂದೆನಿಸುತ್ತದೆ.

ಸುಬ್ಬು ಕೆಲಸಕ್ಕೆಂದು ಹೊರಟಾಗ ಅವನ ಹಿಂದೆಯೇ ಬರುವ ಶ್ರಾವಣಿ ಅವನಿಗೆ ಡಬ್ಬಿ ಕೊಡಬೇಕು ಎನ್ನುವ ಆಸೆ ಹೊಂದಿರುತ್ತಾಳೆ. ಅಷ್ಟೊತ್ತಿಗೆ ಅಲ್ಲಿಗೆ ಬರುವ ಶ್ರೀವಲ್ಲಿ ಸುಬ್ಬು...