Bengaluru, ಮಾರ್ಚ್ 17 -- ಐಸ್ ಕ್ರೀಮ್ ಇಷ್ಟಪಡದವರು ಬಹುಷಃ ಯಾರೂ ಇರಲಿಕ್ಕಿಲ್ಲ. ಮಕ್ಕಳಿಂದ ವಯಸ್ಕರವರೆಗೆ ಎಲ್ಲರೂ ಐಸ್ ಕ್ರೀಮ್ ತಿನ್ನಲು ಬಯಸುತ್ತಾರೆ. ಆದರೆ, ಬೇಸಿಗೆಯಲ್ಲಿ ಐಸ್ ಕ್ರೀಮ್ ತಿನ್ನುವ ಬಯಕೆಯನ್ನು ಹಿಡಿದಿಡುವುದು ಕಷ್ಟ. ವಿಶೇಷವಾಗಿ ಮಕ್ಕಳಿಗಂತೂ ಐಸ್ ಕ್ರೀಂ ಅಂದ್ರೆ ಬಹಳ ಇಷ್ಟ. ಹೀಗಾಗಿ ಮಕ್ಕಳಿಗಾಗಿ ಮಾರುಕಟ್ಟೆಯಲ್ಲಿ ಲಭ್ಯವಿರುವ ಕೆಲವು ಐಸ್ ಕ್ರೀಮ್ ಅನ್ನು ಖರೀದಿಸಿ ತರುತ್ತೇವೆ. ಆದರೆ, ಮನೆಯಲ್ಲೇ ಸುಲಭವಾಗಿ ಐಸ್ ಕ್ರೀಂ ತಯಾರಿಸಬಹುದು.

ಮನೆಯಲ್ಲೇ ಆರೋಗ್ಯಕರವಾಗಿ ಐಸ್ ಕ್ರೀಂ ತಯಾರಿಸಬಹುದು. ಕೆಲವರು ಮನೆಯಲ್ಲೇ ಐಸ್ ಕ್ರೀಂ ತಯಾರಿಸುವಾಗ ಸಕ್ಕರೆ ಬಳಸುತ್ತಾರೆ. ಸಕ್ಕರೆ ಹಾಕದೆಯೂ ರುಚಿಕರವಾಗಿ ಐಸ್ ಕ್ರೀಂ ಮಾಡಬಹುದು. ಕಲ್ಲಂಗಡಿ ಐಸ್ ಕ್ರೀಂ ಮತ್ತು ಒಣ ಹಣ್ಣುಗಳಿಂದ ತಯಾರಿಸಲಾಗುವ ಐಸ್ ಕ್ರೀಂ ಬಹಳ ರುಚಿಕರವಾಗಿರುತ್ತದೆ. ಸಕ್ಕರೆ ಹಾಕದೆ ಮನೆಯಲ್ಲೇ ಕಲ್ಲಂಗಡಿ ಐಸ್ ಕ್ರೀಮ್ ಮತ್ತು ಡ್ರೈ ಫ್ರೂಟ್ಸ್ (ಒಣ ಹಣ್ಣುಗಳ) ಐಸ್ ಕ್ರೀಮ್ ತಯಾರಿಸುವುದು ಹೇಗೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ.

ಬೇಕಾಗು...