Bengaluru, ಫೆಬ್ರವರಿ 11 -- ಮೃದು ಮತ್ತು ತಿನ್ನಲು ರುಚಿಕರವಾದ ಹೈದರಾಬಾದಿ ಚಿಕನ್ ಖಾದ್ಯವನ್ನು ಬಹುತೇಕ ಎಲ್ಲಾ ಚಿಕನ್ ಪ್ರಿಯರು ಇಷ್ಟಪಡುತ್ತಾರೆ. ಆದರೆ, ಇದನ್ನು ಮನೆಯಲ್ಲೇ ತಯಾರಿಸುವಾಗ ರೆಸ್ಟೋರೆಂಟ್‌ನಲ್ಲಿ ತಿನ್ನುವ ರುಚಿ ಇರುವುದಿಲ್ಲ. ಹೈದರಾಬಾದಿ ಚಿಕನ್ ತಯಾರಿಸಲು ವಿಶೇಷ ರೀತಿಯ ಮಸಾಲೆಯನ್ನು ಬಳಸಲಾಗುತ್ತದೆ. ಅಲ್ಲದೆ, ಇದನ್ನು ಮ್ಯಾರಿನೇಟ್ ಮಾಡಲು ಸಾಕಷ್ಟು ಸಮಯವನ್ನು ತೆಗೆದುಕೊಳ್ಳಲಾಗುತ್ತದೆ. ಹೈದರಾಬಾದಿ ಚಿಕನ್ ಖಾದ್ಯ ತಯಾರಿಸುವುದು ಹೇಗೆ ಅನ್ನೋದು ಇಲ್ಲಿದೆ.

ಬೇಕಾಗುವ ಸಾಮಗ್ರಿಗಳು: ಒಂದು ಚಮಚ ಜೀರಿಗೆ, ಒಂದು ಚಮಚ ಸೋಂಪು, ಒಂದು ಚಮಚ ಕಾಳುಮೆಣಸು, ಒಂದು ಚಮಚ ಕೊತ್ತಂಬರಿ ಬೀಜ, 8 ಲವಂಗ, 2 ಜಾವಿತ್ರಿ, 1 ನಕ್ಷತ್ರ ಹೂವು, ಮೂರು ದಾಲ್ಚಿನ್ನಿಯ ಸಣ್ಣ ತುಂಡು, ಎರಡು ಕಪ್ಪು ಏಲಕ್ಕಿ, 8 ಸಣ್ಣ ಹಸಿರು ಏಲಕ್ಕಿ, 4 ಒಣಕಾಶ್ಮೀರಿ ಕೆಂಪು ಮೆಣಸಿನಕಾಯಿ, 3-4 ಈರುಳ್ಳಿ, ಎರಡು ಚಮಚ ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಒಂದು ಕಪ್ ಮೊಸರು, ಒಂದು ಕಪ್ ಹುರಿದ ಈರುಳ್ಳಿ, ಸ್ವಲ್ಪ ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು...