ಭಾರತ, ಮಾರ್ಚ್ 5 -- ಮಕ್ಕಳು ನೂಡಲ್ಸ್ ಅನ್ನು ಎಷ್ಟು ಇಷ್ಟಪಡುತ್ತಾರೆ ಎಂದು ಹೇಳುವ ಅಗತ್ಯವಿಲ್ಲ. ಮ್ಯಾಗಿ ಬೇಕು ಎಂದು ಹಠ ಹಿಡಿಯುತ್ತಾರೆ. ಆರೋಗ್ಯದ ದೃಷ್ಟಿಯಿಂದ ನೂಡಲ್ಸ್ ಕೊಡಲು ಪೋಷಕರು ಹಿಂದೇಟು ಹಾಕುತ್ತಾರೆ. ಆದರೆ, ನೂಡಲ್ಸ್ ಅನ್ನು ಮನೆಯಲ್ಲೇ ತಯಾರಿಸಬಹುದು. ಗೋಧಿಯಿಂದ ಮಾಡಬಹುದಾದ ಆರೋಗ್ಯಕರ ನೂಡಲ್ಸ್ ಅನ್ನು ಮಕ್ಕಳು ಕೂಡ ಇಷ್ಟಪಟ್ಟು ತಿಂತಾರೆ. ಇದು ರುಚಿಕರವೂ ಆಗಿದೆ. ಮನೆಯಲ್ಲೇ ಆರೋಗ್ಯಕರ ನೂಡಲ್ಸ್ ತಯಾರಿಸುವುದು ಹೇಗೆ ಅನ್ನೋದನ್ನು ಇಲ್ಲಿ ತಿಳಿದುಕೊಳ್ಳಿ.

ಬೇಕಾಗುವ ಪದಾರ್ಥಗಳು: ಒಂದು ಕಪ್ ಗೋಧಿ ಹಿಟ್ಟು, ರುಚಿಗೆ ತಕ್ಕಷ್ಟು ಉಪ್ಪು, ಮೂರು ಚಮಚ ಎಣ್ಣೆ, ಜೀರಿಗೆ, ಹಸಿ ಮೆಣಸಿನಕಾಯಿ, ಶುಂಠಿ, ಈರುಳ್ಳಿ, ಕ್ಯಾಪ್ಸಿಕಂ, ಕ್ಯಾರೆಟ್, ಟೊಮಾಟೋ, ಬಟಾಣಿ, ಅರಿಶಿನ, ಮೆಣಸಿನ ಪುಡಿ, ಕೊತ್ತಂಬರಿ ಪುಡಿ, ಗರಂ ಮಸಾಲಾ.

ತಯಾರಿಸುವ ವಿಧಾನ: ಮನೆಯಲ್ಲಿ ನೂಡಲ್ಸ್ ತಯಾರಿಸಲು, ಮೊದಲು ಗೋಧಿ ಹಿಟ್ಟನ್ನು ತೆಗೆದುಕೊಂಡು, ಅದಕ್ಕೆ ನೀರು ಹಾಕಿ ಚಪಾತಿ ನಾದುವಂತೆ ಚೆನ್ನಾಗಿ ಮಿಶ್ರಣ ಮಾಡಿ. ನಂತರ ಬಟ್ಟೆಯನ್ನು ಮುಚ್ಚಿ ಪಕ್...