Bengaluru, ಏಪ್ರಿಲ್ 20 -- ಹಿಂದೂ ಸಂಪ್ರದಾಯದಲ್ಲಿ ಸಾಮಾನ್ಯವಾಗಿ ತುಳಸಿ ಗಿಡಕ್ಕೆ ದೀಪಹಚ್ಚಿ ಪೂಜಿಸುವುದು ಸಾಮಾನ್ಯ. ಅಲ್ಲದೆ ಎಲ್ಲಾ ಮನೆಗಳಲ್ಲಿ ಗಿಡಕ್ಕೆ ಬೆಳಗ್ಗೆ ನೀರೆರೆದು ಭಕ್ತಿಯಿಂದ ಪೂಜೆ ಸಲ್ಲಿಸಿ ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥನೆಯನ್ನೂ ಮಾಡಲಾಗುತ್ತದೆ. ಆದರೆ ಕೇವಲ ಇದರಿಂದ ಮಾತ್ರ ದೇವರನ್ನು ಸಂತುಷ್ಟಗೊಳಿಸಲು ಆಗುವುದಿಲ್ಲ. ಲಕ್ಷ್ಮಿ ದೇವಿಯ ಆಶೀರ್ವಾದ ಮತ್ತು ಲಕ್ಷ್ಮಿ ದೇವಿಯ ಕಟಾಕ್ಷವನ್ನು ಬಯಸುವವರು ಈ ಪರಿಹಾರಗಳನ್ನು ಕೂಡ ಅನುಸರಿಸಬೇಕಾಗುತ್ತದೆ.

ಹಣಕಾಸಿನ ತೊಂದರೆಗಳಿಲ್ಲದೆ ಆರಾಮವಾಗಿ ಜೀವಿತವನ್ನು ಕಳೆಯಬೇಕೆಂಬುದು ಎಲ್ಲರ ಬಯಕೆ. ಲಕ್ಷ್ಮಿ ದೇವಿಯು ಅನುಗ್ರಹ ನಮ್ಮ ಮನೆಗಿದ್ದರೆ, ನಮಗೆ ಯಾವುದೇ ರೀತಿಯ ಹಣಕಾಸು ಸಮಸ್ಯೆಗಳು ಬರುವುದಿಲ್ಲ ಎನ್ನುವುದು ನಂಬಿಕೆ. ಹಾಗಾದ್ರೆ ಲಕ್ಷ್ಮಿಯ ಕೃಪಾ ಕಟಾಕ್ಷಕ್ಕೆ ಒಳಗಾಗಲು ನಾವು ಏನೆಲ್ಲಾ ಮಾಡಬೇಕು? ಲಕ್ಷ್ಮಿ ದೇವಿಯ ಆಶೀರ್ವಾದ ಪಡೆಯಲು ಏನೆಲ್ಲಾ ಪರಿಹಾರಗಳನ್ನು ಅನುಸರಿಸಬೇಕು? ತುಳಸಿ ಗಿಡಕ್ಕೆ ಹೇಗೆ ಪೂಜೆ ಮಾಡಿದರೆ ಲಕ್ಷ್ಮಿ ದೇವಿ ಸಂತುಷ್ಟಳಾಗುತ್ತಾಳೆ? ...