Bengaluru, ಜೂನ್ 5 -- ಜನ್ಮ ಕುಂಡಲಿಯು ಕೇವಲ ಒಬ್ಬ ವ್ಯಕ್ತಿಗೆ ಸಂಬಂಧ ಪಟ್ಟಿರುತ್ತದೆ. ಆದರೆ ಒಂದು ಮನೆಯ ವಾಸ್ತು ಆ ಮನೆಯಲ್ಲಿ ನೆಲೆಸಿರುವ ಎಲ್ಲರಿಗೂ ಸಂಬಂಧ ಪಡುತ್ತದೆ. ಆದ್ದರಿಂದ ವಾಸ್ತುವಿನ ಬಗ್ಗೆ ಎಚ್ಚರಿಕೆ ವಹಿಸುವುದು ಒಳ್ಳೆಯದು. ಮಹಡಿಯ ಮೆಟ್ಟಿಲುಗಳು ಪೂರ್ವ ಆಗ್ನೇಯದ ಭಾಗದಲ್ಲಿ ಇರುವುದು ಒಳ್ಳೆಯದು. ಇದರಿಂದ ಕುಟುಂಬದಲ್ಲಿ ಉತ್ತಮ ಹೊಂದಾಣಿಕೆ ಏರ್ಪಡುತ್ತದೆ. ಕುಟುಂಬದ ಸದಸ್ಯರ ಆರೋಗ್ಯವು ಉತ್ತಮಗೊಳ್ಳುತ್ತದೆ. ಗುರುಗಳ ಮತ್ತು ಕುಲದೈವರ ಅನುಗ್ರಹವು ದೊರೆಯುತ್ತದೆ. ಕುಟುಂಬದ ಕಿರಿಯರು ಮನೆತನದ ಹಿರಿಯರ ಬಗ್ಗೆ ಹೆಚ್ಚಿನ ಗೌರವವನ್ನು ಹೊಂದಿರುತ್ತಾರೆ.

ಮಹಡಿಯ ಮೆಟ್ಟಿಲುಗಳನ್ನು ಉತ್ತರ ವಾಯುವ್ಯದ ಭಾಗದಲ್ಲಿ ಇರುವುದು ಹೆಚ್ಚು ಲಾಭದಾಯಕ. ಇಂತಹ ಮನೆಯಲ್ಲಿ ವಾಸಿಸುವ ವಯೋವೃದ್ದರ ಜೀವನದಲ್ಲಿ ಯಾವುದೇ ತೊಂದರೆ ಕಂಡುಬರುವುದಿಲ್ಲ. ಅವರ ಆರೋಗ್ಯದಲ್ಲಿ ಸ್ಥಿರತೆ ಇರುತ್ತದೆ. ಮನೆತನದಲ್ಲಿ ವಿಶೇಷ ಕೀರ್ತಿ ಪ್ರತಿಷ್ಠೆ ದೊರೆಯುತ್ತದೆ. ಇಂತಹ ಮನೆಯಲ್ಲಿ ವಾಸಿಸುವವರಿಗೆ ಸಮಾಜದಲ್ಲಿ ಉನ್ನತ ಗೌರವ ಮತ್ತು ಸ್ಥಾನ ಮಾನ ಲಭ...