ಭಾರತ, ಮಾರ್ಚ್ 12 -- ದಕ್ಷಿಣ ಭಾರತೀಯ ನೆಚ್ಚಿನ ಬೆಳಗ್ಗಿನ ಉಪಾಹಾರಗಳಲ್ಲಿ ಇಡ್ಲಿಯೂ ಒಂದು. ಬೆಳಗ್ಗಿನ ತಿಂಡಿ ಅಥವಾ ಸಂಜೆ ತಿಂಡಿ ಅಥವಾ ಭೋಜನಕ್ಕೂ, ಇಡ್ಲಿ ಸಾಂಬಾರ್ ಹೆಚ್ಚು ಯೋಚಿಸದೆ ಸವಿಯಬಹುದಾದ ಒಂದು ಖಾದ್ಯ. ಅದು ಆರೋಗ್ಯಕರ ಅಥವಾ ರುಚಿಕರ ತಿನ್ನುವ ಬಗ್ಗೆಯಾಗಿರಲಿ, ಇಡ್ಲಿ ತಿನ್ನಲು ಅತ್ಯುತ್ತಮ ಆಹಾರವಾಗಿದೆ. ಹುದುಗಿಸಿದ ಅಕ್ಕಿ ಮತ್ತು ಉದ್ದಿನ ಬೇಳೆಯಿಂದ ತಯಾರಿಸುವ ಇಡ್ಲಿ ತುಂಬಾ ಹಗುರ ಮತ್ತು ಸುಲಭವಾಗಿ ಜೀರ್ಣವಾಗುವ ಉಪಾಹಾರ.

ಇಡ್ಲಿಯನ್ನು ಸಾಂಬಾರ್ ಅಥವಾ ವಿವಿಧ ಬಗೆಯ ಚಟ್ನಿಯೊಂದಿಗೆ ಸವಿಯಲು ಬಹಳ ರುಚಿಯಾಗಿರುತ್ತದೆ. ಮಾಂಸಾಹಾರಿ ಖಾದ್ಯಗಳೊಂದಿಗೂ ತಿನ್ನಲು ಬಹಳ ರುಚಿಕರವಾಗಿರುತ್ತದೆ. ಇದು ದಕ್ಷಿಣ ಭಾರತದಲ್ಲಿ ಪ್ರಮುಖ ಉಪಾಹಾರ ಖಾದ್ಯ ಎಂದರೆ ತಪ್ಪಿಲ್ಲ. ಮೃದುವಾದ ಮತ್ತು ಸ್ಪಂಜಿನ ವಿನ್ಯಾಸವು ಇದನ್ನು ರುಚಿಕರವಾದ ಉಪಾಹಾರ ಆಯ್ಕೆಯನ್ನಾಗಿ ಮಾಡುತ್ತದೆ. ಇದನ್ನು ಆವಿಯಲ್ಲಿ ಬೇಯಿಸುವುದರಿಂದ ಹಗುರ ಮತ್ತು ಕಡಿಮೆ ಕ್ಯಾಲೋರಿ ಭಕ್ಷ್ಯವಾಗಿದೆ. ತೂಕ ಇಳಿಕೆಗೆ ಪ್ರಯತ್ನಿಸುತ್ತಿರುವವರಿಗೆ ಇಡ್ಲಿಯು ಅತ್ಯುತ್ತಮ ...