ಭಾರತ, ಮಾರ್ಚ್ 13 -- ಮಾಂಸಾಹಾರ ಪ್ರಿಯರು ಚಿಕನ್‌ನಲ್ಲಿ ಏನಾದರೂ ವಿಶೇಷ ಖಾದ್ಯ ತಯಾರಿಸೋಕೆ ಇಷ್ಟಪಡುತ್ತಾರೆ. ಚಿಕನ್ ಸಾಂಬಾರ್, ಗ್ರೇವಿ, ಕಬಾಬ್, ಲಾಲಿಪಪ್ ಈ ತರಹದ ಖಾದ್ಯ ನೀವು ತಯಾರಿಸಿ ತಿಂದಿರಬಹುದು. ಆದರೆ, ಎಂದಾದರೂ ಬಾರ್ಬೆಕ್ಯೂ ಚಿಕನ್ ಪ್ರಯತ್ನಿಸಿದ್ದೀರಾ. ಬಹುಷಃ ನೀವು ಈ ಖಾದ್ಯವನ್ನು ರೆಸ್ಟೋರೆಂಟ್‌ಗಳಲ್ಲಿ ತಿಂದಿರಬಹುದು. ಆದರೆ, ಇದನ್ನು ಮನೆಯಲ್ಲೇ ಸರಳವಾಗಿ ತಯಾರಿಸಬಹುದು. ಇದೊಂದು ಬಹಳ ರುಚಿಕರ ಮಾಂಸಾಹಾರ ಖಾದ್ಯ. ಹಾಗಿದ್ದರೆ ಮನೆಯಲ್ಲೇ ಬಾರ್ಬೆಕ್ಯೂ ಚಿಕನ್ ತಯಾರಿಸುವುದು ಹೇಗೆ ಅನ್ನೋದನ್ನು ಇಲ್ಲಿ ತಿಳಿದುಕೊಳ್ಳಿ.

ಬೇಕಾಗುವ ಪದಾರ್ಥಗಳು: ಅರ್ಧ ಕೆಜಿ ಕೋಳಿ ಮಾಂಸ (ಮೂಳೆಗಳಿಲ್ಲದ), 2 ಚಮಚ ಬೆಳ್ಳುಳ್ಳಿ ಪುಡಿ, 2 ಚಮಚ ಕೆಂಪುಮೆಣಸಿನ ಪುಡಿ, ಅರ್ಧ ಚಮಚ ಚಿಲ್ಲಿ ಫ್ಲೇಕ್ಸ್, 1/2 ಕಪ್ ಬಾರ್ಬೆಕ್ಯೂ ಸಾಸ್ , 1 ಚಮಚ ಜೀರಿಗೆ ಪುಡಿ , ಉಪ್ಪು ರುಚಿಗೆ ತಕ್ಕಷ್ಟು .

ತಯಾರಿಸುವ ವಿಧಾನ: ಬಾರ್ಬೆಕ್ಯೂ ಚಿಕನ್ ಅನ್ನು ಮನೆಯಲ್ಲೇ ಬಹಳ ಸರಳವಾಗಿ ತಯಾರಿಸಬಹುದು. ರೆಸ್ಟೋರೆಂಟ್ ಶೈಲಿಯಂತೆ ಅಲ್ಲದಿದ್ದರೂ ಬೇಕ್ ಮಾಡ...