ಭಾರತ, ಏಪ್ರಿಲ್ 28 -- ನಕಾರಾತ್ಮಕ ಶಕ್ತಿ ಓಡಿಸಲು ವಾಸ್ತು ಪರಿಹಾರ: ಮನೆಯಲ್ಲಿ ಸೌಕರ್ಯವಿದ್ದಷ್ಟು ಖುಷಿ ಹೆಚ್ಚುತ್ತದೆ. ಆದರೆ ಶಾಂತಿ ನೆಮ್ಮದಿ ಬೇಕೆಂದರೆ ಮನೆಯಲ್ಲಿ ಸಕಾರಾತ್ಮಕ ಶಕ್ತಿಗೆ ಯಾವುದೇ ರೀತಿಯ ವಾಸ್ತು ದೋಷ ಇರಬಾರದು. ಮನೆಯಲ್ಲಿ ವಾಸ್ತು ದೋಷವಿದ್ದರೆ, ಅಲ್ಲಿ ಮಾನಸಿಕ, ದೈಹಿಕ ಮತ್ತು ಆರ್ಥಿಕ ಸಮಸ್ಯೆಗಳು ಎದುರಾಗಬಹುದು. ಹೀಗಾಗಿ ವಾಸ್ತು ಶಾಸ್ತ್ರವು ಮನೆಯಿಂದ ನಕಾರಾತ್ಮಕ ಶಕ್ತಿಯನ್ನು ಹೊರಹಾಕಿ ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸಲು ಸರಳ ಕ್ರಮಗಳನ್ನು ತಿಳಿಸುತ್ತದೆ.

ಸ್ವಸ್ತಿಕ ಗುರುತು: ಹಿಂದೂ ಧರ್ಮದಲ್ಲಿ, ಸ್ವಸ್ತಿಕದ ಚಿಹ್ನೆಯನ್ನು ಬಹಳ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಸ್ವಸ್ತಿಕ ಚಿಹ್ನೆಯು ಸಕಾರಾತ್ಮಕ ಶಕ್ತಿಯನ್ನು ರವಾನಿಸುತ್ತದೆ ಎಂದು ಪರಿಗಣಿಸಲಾಗಿದೆ. ಹೀಗಾಗಿ, ಮನೆಯಲ್ಲಿ ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸಲು ಮತ್ತು ನಕಾರಾತ್ಮಕ ಶಕ್ತಿಯನ್ನು ತೆಗೆದುಹಾಕಲು ಮುಖ್ಯ ದ್ವಾರದ ಮೇಲೆ ಸ್ವಸ್ತಿಕ ಚಿಹ್ನೆಯನ್ನು ಹಾಕುವುದು ಶುಭ ಎಂದು ಪರಿಗಣಿಸಲಾಗಿದೆ.

ಉಪ್ಪು ನೀರು ಒರೆಸಿ: ವಾಸ್ತು ಪ್ರಕಾರ,...