Bengaluru, ಫೆಬ್ರವರಿ 18 -- ರಾಗಿಯು ಅದರ ಹಲವಾರು ಆರೋಗ್ಯ ಪ್ರಯೋಜನಗಳಿಂದಾಗಿ ಒಂದು ಸೂಪರ್‌ಫುಡ್ ಎಂದೇ ಗುರುತಿಸಲ್ಪಟ್ಟಿದೆ. ರಾಗಿಯಿಂದ ತರಹೇವಾರಿ ಖಾದ್ಯಗಳನ್ನು ತಯಾರಿಸಬಹುದು. ರಾಗಿಯಿಂದ ಸಂಜೆ ಸ್ನಾಕ್ಸ್‌ಗೆ ಕುರುಕುಲು ತಿಂಡಿಯನ್ನೂ ಸಹ ಮಾಡಬಹುದು. ಇದು ಬಹಳ ರುಚಿಕರವಾಗಿರುತ್ತದೆ. ರಾಗಿ ಚಿಪ್ಸ್‌ನಲ್ಲಿ ನಾರಿನಂಶ, ಕ್ಯಾಲ್ಸಿಯಂ ಮತ್ತು ಗ್ಲುಟನ್ ಮುಕ್ತ ಗುಣಗಳನ್ನು ಹೊಂದಿವೆ.

ಇದು ಆರೋಗ್ಯಕರ ಆಯ್ಕೆಯಾಗಿರುವುದರ ಜೊತೆಗೆ, ಈ ಗರಿಗರಿಯಾದ ಚಿಪ್ಸ್ ಅನ್ನು ಮನೆಯಲ್ಲಿಯೇ ತಯಾರಿಸುವುದು ತುಂಬಾ ಸರಳ. ಆದರೆ, ಕೆಲವೊಮ್ಮೆ ಮನೆಯಲ್ಲಿ ಮಾಡಿದ ಚಿಪ್ಸ್ ಸರಿಯಾಗಿ ಬರುವುದಿಲ್ಲ ಎಂದು ಹಲವರು ದೂರುತ್ತಾರೆ. ರಾಗಿ ಚಿಪ್ಸ್ ಸರಿಯಾಗಿ ಬರಲು ಈ ಸರಳ ಸಲಹೆಗಳನ್ನು ಅನುಸರಿಸಿ.

ಸರಿಯಾದ ಪದಾರ್ಥಗಳನ್ನು ಆರಿಸುವುದು: ಚಿಪ್ಸ್ ತಯಾರಿಸಲು ಉತ್ತಮ ಗುಣಮಟ್ಟದ, ರಾಗಿ ಹಿಟ್ಟನ್ನು ಬಳಸಬೇಕು. ರಾಗಿ ಹಿಟ್ಟಿಗೆ ಅಕ್ಕಿ ಹಿಟ್ಟು, ಕಡಲೆಹಿಟ್ಟು ಮತ್ತು ಗೋಧಿ ಹಿಟ್ಟಿನಂತಹ ಇತರ ಹಿಟ್ಟುಗಳನ್ನು ಸಹ ಮಿಶ್ರಣ ಮಾಡಬಹುದು. ರಾಗಿ ಚಿಪ್ಸ್ ತಯಾರಿಸಲು ...