ಭಾರತ, ಮೇ 22 -- ಅಮೃತಧಾರೆ ಧಾರಾವಾಹಿಯ ನಿನ್ನೆಯ ಎಪಿಸೋಡ್‌ನನಲ್ಲಿ ಜೈದೇವ್‌ ತನ್ನ ಮನೆಗೆ ದಿಯಾಳನ್ನು ಕರೆದುಕೊಂಡು ಬಂದಿದ್ದಾನೆ. ಇನ್ನೊಂದಡೆ ಗೌತಮ್‌ ದಿವಾನ್‌ ತನ್ನ ಕುಟುಂಬದ ಜತೆ ಕನಕದುರ್ಗ ಗೆಸ್ಟ್‌ ಹೌಸ್‌ಗೆ ಬರುತ್ತಾರೆ. ಆ ಗೆಸ್ಟ್‌ ಹೌಸ್‌ ನೋಡಿ ಭೂಮಿಕಾಗೆ ಅಚ್ಚರಿಯಾಗುತ್ತದೆ. ಇಷ್ಟೆಲ್ಲ ಯಾಕೆ ಖರ್ಚು ಮಾಡಬೇಕು, ಕ್ಲಯೆಂಟ್‌ಗಳಿಗೆ ಹೋಟೆಲ್‌ ರೂಂ ಮಾಡಿ ಕೊಡಬಹುದಲ್ವ ಎಂದು ಭೂಮಿಕಾ ಹೇಳುತ್ತಾಳೆ. ಇದು ತಂದೆ ಆ ಕಾಲದಲ್ಲಿ ಕಟ್ಟಿರುವ ಗೆಸ್ಟ್‌ ಹೌಸ್‌ ಎಂದು ಗೌತಮ್‌ ಹೇಳುತ್ತಾರೆ. ಹೀಗೆ, ಭೂಮಿಕಾ- ಗೌತಮ್‌, ಆನಂದ್‌- ಅಪರ್ಣ ಗೆಸ್ಟ್‌ ಹೌಸ್‌ನಲ್ಲಿ ಇಂದು ಹಾಯಾಗಿ ಕಾಲ ಕಳೆಯುತ್ತಿದ್ದಾರೆ.

ಇನ್ನೊಂದೆಡೆ ಸುಧಾ ಮತ್ತು ಸೃಜನ್‌ ಮಾತನಾಡುತ್ತಿದ್ದಾರೆ. ಇವರಿಬ್ಬರ ಬಾಲ್ಯದ ಪರಿಚಯ ಗೊತ್ತಾಗಿದೆ. ಹಳೆಯದನ್ನು ನೆನಪಿಸಿಕೊಂಡಿದ್ದಾರೆ. ನಿಮಗೆ ಅಂದು ತುಂಬಾ ಕಷ್ಟ ಇತ್ತು ಅಲ್ವಾ? ಅಷ್ಟೆಲ್ಲ ಹೇಗೆ ಓದಿದ್ರಿ ಎಂದು ಸುಧಾ ಕೇಳುತ್ತಾಳೆ. "ಪ್ರಪಂಚದ ಕಷ್ಟ ಎಲ್ಲಾ ನನ್ನ ಮನೆಯಲ್ಲಿ ಟೆಂಟ್‌ ಹಾಕಿ ಕೂತಿತ್ತು." ಎಂದು ಸೃಜನ್‌ ಹ...