Bengaluru, ಫೆಬ್ರವರಿ 13 -- Lakshmi Nivasa Serial: ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಬುಧವಾರ ಫೆಬ್ರುವರಿ 12ರ ಸಂಚಿಕೆಯಲ್ಲಿ ಸಿದ್ಧೇಗೌಡನ ನಡವಳಿಕೆ ಕಂಡು ಮರಿಗೌಡನಿಗೆ ಕಿರಿಕಿರಿ ಉಂಟಾಗುತ್ತದೆ. ಆತ, ಸಿದ್ದೇಗೌಡನನ್ನು ಬಳಿಗೆ ಕರೆದು, ನಾನು ನಿನ್ನ ಅಣ್ಣ, ನಿನ್ನ ಮನಸ್ಸಿನಲ್ಲಿ ಏನಾಗುತ್ತಿದೆ ಎಂದು ನನಗೆ ಅರಿವಾಗುತ್ತದೆ. ಹೀಗಾಗಿ, ನೀನು ಯಾವುದನ್ನೂ ಮುಚ್ಚಿಡಬಾರದು, ನೀನು ಮನೆಯಲ್ಲಿ ಸದಾ ಖುಷಿಖುಷಿಯಾಗಿರಬೇಕು, ಆಗ ಮಾತ್ರ ಭಾವನಾ ಮತ್ತು ನೀನು ಇಬ್ಬರೂ ಖುಷಿಯಾಗಿ ಇರುತ್ತೀರಿ ಎನ್ನುತ್ತಾನೆ. ಅದಕ್ಕೆ ಒಪ್ಪಿಗೆ ಸೂಚಿಸಿದ ಸಿದ್ದೇಗೌಡ, ನನಗೆ ಆ ಘಟನೆ ಮರೆಯಲಾಗುತ್ತಿಲ್ಲ ಎಂದು ಹೇಳುತ್ತಾನೆ. ಆದರೆ ಈ ಸಂಗತಿ ಬಹಿರಂಗವಾದರೆ ನಿನಗೆ ತೊಂದರೆ ತಪ್ಪಿದ್ದಲ್ಲ ಎಂದು ಮರಿಗೌಡ ಎಚ್ಚರಿಸುತ್ತಾನೆ, ಅದಕ್ಕಾಗಿ ನೀನು ನಾವು ಹೇಳಿದಂತೆ ಕೇಳಿಕೊಂಡು ಸುಮ್ಮನೆ ಇರಬೇಕು ಎಂದು ಹೇಳುತ್ತಾನೆ. ಕೊನೆಗೆ ಸಿದ್ದೇಗೌಡ ವಿಧಿಯಿಲ್ಲದೇ ಒಪ್ಪಿಗೆ ಸೂಚಿಸುತ್ತಾನೆ. ಜತೆಗೆ ಮರಿಗೌಡನಿಗೆ ಭಾಷೆ ಕೊಡುತ್ತಾನೆ.

ಮರಿಗೌಡನಿಗೆ ಭಾಷೆ ಕೊಟ್ಟ ಬಳಿಕ...