Bengaluru, ಮಾರ್ಚ್ 13 -- Bhagyalakshmi Serial: ಭಾಗ್ಯಲಕ್ಷ್ಮೀ ಧಾರಾವಾಹಿಯ ಬುಧವಾರ ಮಾರ್ಚ್ 12ರ ಸಂಚಿಕೆಯಲ್ಲಿ ಭಾಗ್ಯ ಮನೆಗೆ ಬರುವುದನ್ನೇ ಗುಂಡಣ್ಣ ಕಾಯುತ್ತಾ ಕುಳಿತಿದ್ದಾನೆ. ಅಮ್ಮ ರೆಸಾರ್ಟ್‌ನಲ್ಲಿ ಜೋಕರ್ ವೇಷ ಹಾಕಿ ಕುಣಿಯುವುದು ಮತ್ತು ಸಂಪಾದನೆಗೆ ದಾರಿ ಮಾಡಿಕೊಂಡಿರುವುದು ಅವನು ಗಮನಿಸಿದ್ದಾನೆ. ಆದರೆ ಈ ವಿಚಾರ ಯಾರಿಗೂ ತಿಳಿಯಬಾರದು ಎನ್ನುವುದು ಅವನ ನಿಲುವಾಗಿದೆ. ಹೀಗಾಗಿ ಯಾರ ಜೊತೆಗೂ ಅವನು ಈ ಬಗ್ಗೆ ಚರ್ಚಿಸಿಲ್ಲ. ಆದರೆ ಅಮ್ಮ ಅಷ್ಟೊಂದು ಕಷ್ಟಪಡುವುದು ಮತ್ತು ಮನೆಕೆಲಸ ಮಾಡುವುದು ಅವನಿಗೆ ಬೇಸರ ತರಿಸಿದೆ. ಹೀಗಾಗಿ ಮನೆಯಲ್ಲಿ ಗುಂಡಣ್ಣ ಯಾರ ಜೊತೆಗೂ ಮಾತನಾಡದೇ ಮೌನವಾಗಿದ್ದಾನೆ. ಅಮ್ಮ ಬಂದ ಕೂಡಲೇ ಅವಳನ್ನು ಊಟ ಮಾಡಲು ಕರೆದುಕೊಂಡು ಹೋಗಿದ್ದಾನೆ.

ಬಟ್ಟಲಿನಲ್ಲಿ ಊಟ ಬಡಿಸಿಕೊಂಡು ಬಂದ ಗುಂಡಣ್ಣ, ಅದನ್ನು ಎಲ್ಲರೆದುರು ಅಮ್ಮನಿಗೆ ತಿನ್ನಿಸಿದ್ದಾನೆ. ಮನೆಯಲ್ಲಿ ಎಲ್ಲರನ್ನೂ ನೀನು ಚೆನ್ನಾಗಿ ನೋಡಿಕೊಳ್ಳುತ್ತಿ, ಆದರೆ ನಿನ್ನನ್ನು ನೋಡಿಕೊಳ್ಳುವವರು, ಕೇಳುವವರು ಯಾರೂ ಇಲ್ಲ ಎಂದು ಗುಂಡಣ್ಣ ಬೇಸರಪಟ್ಟು...