Bengaluru, ಮಾರ್ಚ್ 27 -- ಚಂದನವನದ ಅವಳಿ ಸಹೋದರಿಯರು ಕನ್ನಡದ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ, ಕಿರುತೆರೆಯಲ್ಲಿಯೂ ಗಮನ ಸೆಳೆದಿದ್ದಾರೆ. ಸೋಷಿಯಲ್‌ ಮೀಡಿಯಾದಲ್ಲಿಯೂ ಸಕ್ರಿಯರಿರುವ ಇವರು, ಇದೀಗ ರಾಜೇಶ್‌ ಗೌಡ ಯೂಟ್ಯೂಬ್‌ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಅಪ್ಪನ ನಿಧನದ ದಿನ ಆದ ಒಂದಷ್ಟು ವಿಚಿತ್ರ ಅನುಭವಗಳ ಬಗ್ಗೆ ಮಾತನಾಡಿದ್ದಾರೆ. ಅಶ್ವಿತಿ ಅವರ ಮಾತಿನ ಧಾಟಿಯಲ್ಲಿಯೇ ಇಲ್ಲಿದೆ ಅದರ ವಿವರ.

"ಅಪ್ಪ ತೀರಿಕೊಂಡ ದಿನ ನಾವು ಅವರ ಆತ್ಮವನ್ನು ನೋಡಿದ್ವಿ. ಅಪ್ಪ ಸತ್ತಾಗ ಮನೆಯಲ್ಲಿ ಅವರ ಫೇವರೇಟ್‌ ಕುರ್ಚಿ ಮೇಲೆಯೇ ಅವರನ್ನು ಕೂರಿಸಿದ್ವಿ. ಆವತ್ತಿನ ಅಪ್ಪನ ಕಾರ್ಯ ಎಲ್ಲವೂ ಮುಗಿದ ಮೇಲೆ ಆ ಚೇರ್‌ನ್ನು ಯಾರೋ ಅಡುಗೆ ಮನೆಯ ಒಳಗಡೆ ಇಟ್ಟು ಬಿಟ್ಟಿದ್ದರು.

"ರಾತ್ರಿ ನಾವು ಹೀಗೆ ಸೋಫಾ ಮೇಲೆ ಕೂತುಕೊಂಡಿದ್ದಾಗ, ಯಾರೋ ಕಿಚನ್‌ ಒಳಗೆ ಹೋದಂತೆ ಆಯ್ತು. ಅಷ್ಟಕ್ಕೂ ಅದು ನಮ್ಮ ಅಪ್ಪನೇ. ಅವರು ಸತ್ತಾಗ ಧರಿಸಿದ್ದ ಅದೇ ಪಂಚೆ ಮತ್ತು ಶರ್ಟ್‌ನಲ್ಲಿ ಹೇಗೆ ಕಾಣಿಸಿದ್ದರೋ, ಅದೇ ರೀತಿ ಅವರ ನೆರಳನ್ನು ನೋಡಿದ್ವಿ. ಅವರ ತಲೆಗೆ ಕಟ...